ನನ್ನಯ್ಯ ನೀನೊಬ್ಬನೆ ಮಾರುತಿವರದ ಪ.
ಉನ್ಮತ್ತ ತಂದೆ ಕೊಲ್ಲಲು ಒಯ್ಯಲು ತಾಯಿ
ಚಿನ್ನನ್ನುಳಿಸಿಕೊಂಡಳೆ ಬನ್ನವನುಣ್ಣುತ
ನಿನ್ನಿಚ್ಛೆಯೆನ್ನಲು ವಹ್ನಿವಿಷಾನ್ನವ ತಣ್ಣಸ
ವೆನ್ನಿಪೆ ತನ್ನವರಿನ್ನ್ಯಾಕೊ ನರಹರಿಯೆ 1
ಉತ್ತಾನಪಾದಿ ಮುನಿದು ಅಡವಿಯ ದಾರಿ
ಹತ್ತಿ ನಿರಾಲಂಬದಿ ಉತ್ತಮ ಮಂತ್ರ ನಾರ
ದಿತ್ತರೆ ಭಕ್ತಿಂದ ಅತ್ತಿತ್ತಾಗದ ಚಿತ್ತಕೆ ಒಲಿದೆ
ಹೆತ್ತವರೊತ್ತಾದರೆ ವಾಸುದೇವ 2
ಅಗ್ರಜಾವಜ್ಞ ಮಾಡಲು ವಿಭೀಷಣ
ಶೀಘ್ರ ಪಾದಾಬ್ಜಕೆರಗಲು ವ್ಯಗ್ರಪ್ಲವ
ಗಗ್ರರು ಉಗ್ರದಿ ನಿಗ್ರಹಿಸೆ ಆಗ್ರಹಿಸಿದೆ ಭ
ಕ್ತಾಗ್ರಣಿ ಹನುಮ ಮತಾಗ್ರದಿ ಪ್ರಸನ್ವೆಂಕಟ3
No comments:
Post a Comment