ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು
ಸರ್ಪಶಯನನ ದೂತಾ || ಪ ||
ಇಪ್ಪತ್ತೋಂದು ಕುಭಾಷ್ಯವ ಮುರಿದ ಸುಮತ ಪ್ರ
ವರ್ತಕ ರಾಘವೇಂದ್ರ – ಮುನಿಪ || ಅ ||
ಸರ್ಪಶಯನನ ದೂತಾ || ಪ ||
ಇಪ್ಪತ್ತೋಂದು ಕುಭಾಷ್ಯವ ಮುರಿದ ಸುಮತ ಪ್ರ
ವರ್ತಕ ರಾಘವೇಂದ್ರ – ಮುನಿಪ || ಅ ||
ಪ್ರತಿವರುಷ ಬಂದು ನುತಿಸಿ ಪೋಗು ಎಂದು
ನತಸ್ವಪ್ನದಲಿ ನೀ ಬಂದು
ಹಿತದಿಂದ ಪೇಳಲು ರತನಾಗಿ ಧನದಿ ಮ
ರೆತುಬಿಟ್ಟೆ ನಿಮ್ಮನು – ಯತಿಕುಲೋತ್ತಮ || ೧ ||
ನತಸ್ವಪ್ನದಲಿ ನೀ ಬಂದು
ಹಿತದಿಂದ ಪೇಳಲು ರತನಾಗಿ ಧನದಿ ಮ
ರೆತುಬಿಟ್ಟೆ ನಿಮ್ಮನು – ಯತಿಕುಲೋತ್ತಮ || ೧ ||
ಸ್ನಾನ ಸಂಧ್ಯಾನ ಸುಜಪತಪ ವ್ರತ ಹೋಮ
ಮೌನ ಮಾರ್ಗಗಳರಿಯೇ
ಜ್ಞಾನಿಗಳಾನುಸಂಧಾನಪೂರ್ವಕ ಪೂಜೆ
ಏನೂ ಮಾಡದೆ – ದುಷ್ಟಮಾನವರೊಳಗಿದೆ || ೨ ||
ಮೌನ ಮಾರ್ಗಗಳರಿಯೇ
ಜ್ಞಾನಿಗಳಾನುಸಂಧಾನಪೂರ್ವಕ ಪೂಜೆ
ಏನೂ ಮಾಡದೆ – ದುಷ್ಟಮಾನವರೊಳಗಿದೆ || ೨ ||
ಏಸುಜನ್ಮದಿ ಬಂದ ದೋಷವ ಕಳೆದು ವಿ
ಶೇಷ ಸುಖವ ಕೊಡುವ
ಈ ಸುವಾರ್ತೆಯ ಕೇಳಿ ಮೊರೆಹೊಕ್ಕ ಗುರುಪ್ರಾ
ಣೇಶವಿಠ್ಠಲನ ದೂತಾ – ಮತ್ಪ್ರೀತಾ || ೩ ||
ಶೇಷ ಸುಖವ ಕೊಡುವ
ಈ ಸುವಾರ್ತೆಯ ಕೇಳಿ ಮೊರೆಹೊಕ್ಕ ಗುರುಪ್ರಾ
ಣೇಶವಿಠ್ಠಲನ ದೂತಾ – ಮತ್ಪ್ರೀತಾ || ೩ ||
No comments:
Post a Comment