ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ ಪ
ಆಚಾರಿಯೆನಲಿ ಬಹು ದು | ರಾಚಾರಿಯೆನಲಿ ಜನರೆಲ್ಲನೀಚನೆಂದೆನಲಿ ಅನದಿರಲಿ 1
e್ಞÁನಿ ಎಂದೆನಲಿ ದುರ್ಮಾರ್ಗ | ನಾನೆನಲಿ ಜನರೆಲ್ಲ ಬಹು ಮಾನವಂತನೆನಲಿ ಅನದಿರಲಿ 2
ಪಾಪಿಯಾಗಿರಲಿ ಬಹು ಸಂ | ತಾಪಿಯಾಗಿರಲಿ ಜನರೆಲ್ಲಪಾಪಿಯೆಂದೆನಲಿ ಅನದಿರಲಿ 3
ರಾಗವೇ ಬರಲಿ ಬಹು ವೈ | ಭೋಗವೇ ಬರಲಿ ವಿಷಯ ನಿಯೋಗವೇ ಬರಲಿ ಬರದಿರಲಿ 4
ಒಲಿದರೆ ನೀ ವ್ಯಾಸವಿಠಲ ಜನ | ರೆಲ್ಲ ಮತ್ತ್ಹಳಿಯುತಿರಲಿ ಇರದಿರಲಿ ಏನಾದರಾಗಲಿ ಹರಿಯೆ 5
No comments:
Post a Comment