Labels

Wednesday, 25 December 2019

ಸತತ ಪಾಲಿಸೋ ಎನ್ನ | ಯತಿ ರಾಘವೇಂದ್ರ satata paaliso enna yati

ಸತತ ಪಾಲಿಸೋ ಎನ್ನ | ಯತಿ ರಾಘವೇಂದ್ರ |
ಪತಿತ ಪಾವನ ಪವನ | ಸುತಮತಾಂಬುಧಿ ಚಂದ್ರ ಪ
ನಂಬಿದೆನು ನಿನ್ನ ಚರಣಾಂಬುಜವ ಮನ್ಮನದ
ಹಂಬಲವ ಪೂರೈಸೊ ಬೆಂಬಿಡದಲೆ ||
ಕುಂಭಿಣೀಸುರ ನಿಕುರುಂಭ ವಂದಿತ ಜಿತ
ಶಂಬರಾಂತಕ ಶಾತಕುಂಭ ಕಶ್ಯಪ ತನಯ 1
ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿ
ವೀಣ ವೆಂಕಟ ಅಭಿದಾನದಿಂದ
ಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮೆ |
ಏನೆಂದು ಬಣ್ಣಿಸಲಿ e್ಞÁನಿ ಕುಲತಿಲಕ2
ಮಂದಮತಿಗಳ ಸಂಗದಿಂದ ನಿನ್ನಯ ಚರಣ
ಇಂದಿನ ತನಕ ನಾ ಪೊಂದಲಿಲ್ಲ
ಕುಂದು ಎಣಿಸದೆ ಕಾಯೊ ಕಂದರ್ಪಪಿತ ಶಾಮ
ಸುಂದರನ ದಾಸಕರ್ಮಂದಿ ಕುಲವರ್ಯ 3

No comments:

Post a Comment