Labels

Monday, 30 December 2019

ಮನವೆ ಚಂಚಲ ಮತಿಯ ಬಿಡು manava chanchala matiya

ಮನವೆ ಚಂಚಲ ಮತಿಯ ಬಿಡು - ನಮ್ಮ |
ವನಜನಾಭನ ಪಾದಭಜನೆಯ ಮಾಡು ಪ.
ಬಡಮನುಜಗೆ ಬಾಯಬಿಡುವ ದೈನ್ಯದಲವನ |
ಅಡಿಗಳಿಗೆರಗಲು ಕೊಡುವನೇನೊ ||
ಕಡಲಶಯನ ಜಗದೊಡೆಯನ ನೆನೆಯಕ್ಕೆ - |
ಪಿಡಿದು ತಾ ಸಲಹುವ ಬಿಡದಲೆ ಅನುಗಾಲ 1
ಬಲ್ಲಿದ ಭಕುತರ ಬಲ್ಲವ ಬಹುಸಿರಿ |
ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||
ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗು
ನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2
ಮುಗಿಲು ಮೇಲದೆಗಡೆ ಅಗಣಿತವಾದಾಪ - |
ತ್ತುಗಳು ಬಂದಡರಲು ನಗುತಲಿರು ||
ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |
ಪೊಗಳುತ ಬಾಳು ನೀ ಅಘಗಳ ಗಣಿಸದೆ 3
ಆವಾವ ಕಾಲಕೆ ದೇವನಿಚ್ಛೆಯಿಂದ |
ಆವಾವುದು ಬರೆ ನಿಜಸುಖವೆನ್ನು ||
ಶ್ರೀವರ ಅನಾದಿಜೀವರ ಕ್ಲಪ್ತದಂತೆ |
ಈವನು ನಿಜಸ್ವಭಾವ ಬಿಡದೆ ನಿತ್ಯ 4
ಕೇಶವಾಚ್ಯುತ ಶ್ರೀನಿವಾಸ ಮುರಾರೇ |
ದೋಷರಹಿತ ದೀನ ಪೋಷಕನೆನ್ನು ||
ಮೋಸಗೊಳಿಪ ಭವಪಾಶವ ಖಂಡಿಪ |
ಶ್ರೀಶ ಪುರಂದರವಿಠಲನು ಜಗಕಿರೆ 5

1 comment:

  1. ಸ್ತುತ್ಯಾರ್ಹ ಹಾಗೂ ಅಭಿನಂದನೆಗಳು, ನಿಜಕ್ಕೂ ಶ್ಲಾಘನೀಯ ಈ ವೇದಿಕೆ. ಹರಿದಾಸ ಸಾಹಿತ್ಯ ಲಭ್ಯವಾದರೆ ಮನಸಿನಲ್ಲಿ ಸದಾ ಗುನುಗಲು ಸಹಕಾರಿ ಹಾಗು ಕನ್ನಡಿಗರ ಮನದಾಳದಲ್ಲಿ ಸದಾ ಇಂಥಹ ಭಕ್ತಿಯ ಗೀತೆಗಳ ಸಾಹಿತ್ಯ ಲಭ್ಯವಾದರೆ ಮನಸ್ಸನ್ನು ಏಕಾಗ್ರತೆಯ ಕಡೆಗೆ ಕೊಂಡೊಯ್ದು ಪರಮಾನಂದದ ಪರಮಾವಧಿ ತಲುಪಲು ಸಹಕಾರಿ. ಧನ್ಯೋಸ್ಮಿ.

    ReplyDelete