Labels

Monday, 30 December 2019

ಮಡಿ ಮಡಿದ ಮಡಿಯೆಂದು ಮುಮ್ಮಾರು madi madi mammaru

ಮಡಿ ಮಡಿದ ಮಡಿಯೆಂದು ಮುಮ್ಮಾರು ಹಾರುತಿ |
ಮಡಿಯೆಲ್ಲಿ ಬಂದಿತೊ ಬಿಕನಾಶಿ ಪ.
ಮಡಿಯು ನೀನೆ - ಮೈಲಿಗೆ ನೀನೆ - |
ಸುಡಲಿ ನಿನ್ನ ಮಡಿ ಬಿಕನಾಶಿ ಅಪ
ಎಲವು - ಚರ್ಮ - ಮಲ - ಮೂತ್ರ ಗುಂಡಿಯಲಿ |
ನಲಿಯುತ ನಿಂತೆಯಾ ಬಿಕನಾಶಿ ||
ನೆಲೆಗೊಂಡ ನವದ್ವಾರದ ಹೊಲೆಯೊಳು |
ಅಳಲುತ ನೀ ಬಿದ್ದೆ ಬಿಕನಾಶಿ 1
ಹುಟ್ಟಲು ಸೂತಕ ಸಾಯಲು ಸೂತಕ |
ನಟ್ಟುನಡುವೆ ಬಂತೆ ಬಿಕನಾಶಿ ||
ಬಿಟ್ಟು ಬಿಡದೆ ಕಾವೇರಿಯ ಮುಳುಗಲು |
ಮುಟ್ಟು ಹೋಹುದೆ ಬಿಕನಾಶಿ 2
ಚರ್ಮವು ತೊಳದರೆ ಕರ್ಮವು ಹೋಹುದೆ |
ಮರ್ಮವ ತಿಳಿಯದೆ ಬಿಕನಾಶಿ ||
ಬೊಮ್ಮನಯ್ಯ ಪುರಂದರವಿಠಲನ ಪಾಡಿ |
ನಿರ್ಮಲದಿ ಬಾಳೆಲೊ ಬಿಕನಾಶಿ 3

No comments:

Post a Comment