Labels

Tuesday, 24 December 2019

ಹರಿದಾಡುವಂಥ ಮನವ haridaduvanta manava

ಹರಿದಾಡುವಂಥ ಮನವ ನಿಲಿಸುವುದು ಬಹುಕಷ್ಟ ಪ.
ಕಾಶಿಗೆ ಹೋಗಲುಬಹುದು
ದೇಶ ತಿರುಗಲುಬಹುದು
ಆಶೆ ಸುಟ್ಟು ತಾನಿರಬಹುದು1
ಜಪವ ಮಾಡಲುಬಹುದು
ತಪವ ಮಾಡಲುಬಹುದು
ಉಪವಾಸದಲ್ಲಿ ತಾನಿರಬಹುದು2
ಸ್ನಾನ ಮಾಡಲುಬಹುದು
ದಾನ ಮಾಡಲುಬಹುದು
ದ್ಯಾನದಿ ಪುರಂದರವಿಠಲನ ಚರಣದಿ3

No comments:

Post a Comment