ಹರಿಗೆ ಸರಿ - ಮಿಗಿಲೆನಿಪರಿಲ್ಲ ದೈವಂಗಳೊಳು |
ಗುರು ಮಧ್ವರಾಯರಿಗೆ ಸರಿಯಿಲ್ಲ ರಾಯರೊಳು |
ಪರಮವೈಷ್ಣವರಿಗೆಣೆಯಿಲ್ಲ ಲೋಕದೊಳೆಂದು
ಬಿಡದೆ ಡಂಗುರವ ಹೊಯಿಸಿ ||
ಬಿರುದ ಪಸರಿಸಿ ಢಕ್ಕೆಯವ ನುಡಿಸಿ ಎನ್ನುತಲಿ |
ಶರಣು ಹೊಕ್ಕರ ಪಣೆಯ ದುರ್ಲೇಖಮಂ ತೊಡೆದು |
ಬರೆದು ವೈಷ್ಣವಲಿಪಿಯ ಶುದ್ಧಾತ್ಮರಂ
ಮಾಳ್ವ ಗುರುರಾಯರನು ಭಜಿಸಿರೈ 1
ಭುವನ ಪಾವನರಪ್ಪ ಪೂರ್ಣಪ್ರಜ್ಞರ ಸ್ತೋತ್ರ |
ನವರತ್ನಮಾಲೆಯಿದು ಶ್ರೀ ವಿಷ್ಣುದಾಸರಿಗೆ |
ಶ್ರವಣಮಂಗಳವಪ್ಪ ತತ್ತ್ವಾಮೃತದ ಸಾರ
ಜನ್ಮ ಮೂಲೋತ್ಪಾಟನ ||
ಜವನ ಗಂಟಲನೊಡೆದು ತನ್ನ ನಿಜದಾಸರಿಗೆ |
ಧ್ರುವವಾಗಿ ಪರಮಪದವಿಯನಿತ್ತು ರಕ್ಷಿಸುವ |
ಪವನನಂತರ್ಯಾಮಿ ಪುರಂದರ ವಿಠಲನ
ತವಕದಿಂದಲಿ ಭಜಿಸಿರೈ 9
No comments:
Post a Comment