Labels

Wednesday, 25 December 2019

ಎಂಥ ದಯವಂತನೋ | ಮಂತ್ರ entha dayavantano

ಎಂಥ ದಯವಂತನೋ | ಮಂತ್ರ ಮುನಿನಾಥನೊ
ಸಂತಸದಿ ತನ್ನನು | ಚಿಂತಿಪರಿಗೆ ಸುರಧೇನು ಪ
ವರ ಪ್ರಹ್ಲಾದನು | ಮರಳಿ ಬಾಹ್ಲೀಕನು |
ಶ್ರೀ ಗುರುವ್ಯಾಸರಾಯನೊ | ಪರಿಮಳಾಚಾರ್ಯನೊ 1
ಇರುವ ತುಂಗಾತಟದಲ್ಲಿ | ಬರುವ ತಾನು ಕರೆದಲ್ಲಿ
ಕರಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ 2
ಮರುತಾವೇಶಯುಕ್ತನು | ದುರಿತ ಕಳೆವ ಶಕ್ತನು
ತರಣಿ ನಿಭಗಾತ್ರನು | ಪರಮಸುಚರಿತ್ರನು 3
ಶಿಶುವಿಗವುಗರೆದನು | ವಸುಧಿ ಸುರರ ಪೊರೆವನು
ಅಸಮ ಮಹಿಮನೊ | ಸುಶೀಲೇಂದ್ರ ವರದನೊ 4
ಭೂಮಿಯೊಳು ಖ್ಯಾತನು | ಶಾಮಸುಂದರ ಪ್ರೀತನು
ಕಾಮಿತಾರ್ಥದಾತನು | ಸ್ವಾಮಿ ನಮಗೆ ಈತನು 5

No comments:

Post a Comment