Labels

Monday, 30 December 2019

ಮಣ್ಣಿಂದ ಕಾಯ ಮಣ್ಣಿಂದ mankind and kaya manninda

ಮಣ್ಣಿಂದ ಕಾಯ ಮಣ್ಣಿಂದ |
ಮಣ್ಣಿಂದ ಸಕಲ ವಸ್ತುಗಳೆಲ್ಲ ||ಪ||
ಮಣ್ಣ ಬಿಟ್ಟವರಿಗಾಧಾರವಿಲ್ಲ|
ಅಣ್ಣಗಳೆಲ್ಲರು ಕೇಳಿರಯ್ಯ ||ಅ||ಪ||

ಅನ್ನ ಉದಕ ಊಟವೀಯುದು ಮಣ್ಣು |
ಬಣ್ಣ ಬಂಗಾರ ಬೊಕ್ಕಸವೆಲ್ಲ ಮಣ್ಣು |
ಉನ್ನತವಾದ ಪರ್ವತವೆಲ್ಲ ಮಣ್ಣು |
ಕಣ್ಣು ಮೂರುಳ್ಳನ ಕೈಲಾಸ ಮಣ್ಣು ||1||

ದೇವರಗುಡಿ ಮಠ ಮನೆಯೆಲ್ಲ ಮಣ್ಣು |
ಆವಾಗ ಆಡುವ ಮಡಕೆಯು ತಾ ಮಣ್ಣು |
ಕೋವಿದರಸರ ಕೊಡೆಗಳೆಲ್ಲ ಮಣ್ಣು |
ಪಾವನಗಂಗೆಯ ತಡೆಯೆಲ್ಲ ಮಣ್ಣು ||2||

ಭಕ್ತ ಭರಣ ಧಾನ್ಯ ಬೆಳೆವುದೇ ಮಣ್ಣು |
ಸತ್ತವರನು ಹೂಳಿಸಿಡುವುದೇ ಮಣ್ಣು |
ಉತ್ತಮವಾದ ವೈಕುಂಠವೇ ಮಣ್ಣು |
ಪುರಂದರವಿಠಲನ ಪುರವೆಲ್ಲ ಮಣ್ಣು||3||

No comments:

Post a Comment