ದಯದಿ ಪಾಲಿಸೋ ಜಯತೀರಥ ರಾಯಾ | ಅಕ್ಷೋಭ್ಯರ ತನಯಾ ಪ
ಅತ್ಯಂತ್ಹರುಷದಿ ಎತ್ತಾಗಿರುತಿರಲೂ ಶ್ರೀ |ಆನಂದ ತೀರಥರೂನಿತ್ಯ ಪಠಿಸುವೋ ಪುಸ್ತಕ ಹೊರುತಿರಲೂ |ಗುರುರಾಯರು ಪೇಳಿದತತ್ವ ಗ್ರಂಥವನೆ ಕಿವಿಯಲಿ ಕೇಳುತಲೀ | ತಲೆಯನು ತೂಗುತಲೀಮತ್ತೆ ಪುಟ್ಟಿದ್ಯೋ ಮಂಗಳವೇಡೆಯಲೀ | ಅತಿ ಮತಿವಂತರಲೀ 1
ದೇಶಪಾಂಡೆರಾ ಕೂಸಾಗಿ ಜನಿಸೀ | ಘನ ರಾವುತನೆನಿಸೀದೇಶ ದೇಶದೋಳ್ ಸೈನ್ಯವನೇ ಚರಿಸೀ | ಹಣವನ್ನೇ ಗಳಿಸೀವಾಸುಕಿಯೆಂಬೋ ಗುರುತನೆ ತಪ್ಪಿಸೀ | ನದಿಗೇ ನೀರಡಿಸೀಶ್ರೀಶನಾಜ್ಞೆಯೊಳಿವರನೆ ಕರೆತರಿಸೀ |ಶಿಖೆ ಸೂತ್ರವ ತೆಗೆಸೀ2
ಹಿಂಡು ಹಿಂಡು ಜನ ಅಂಡಲಿಯುತ ಬದೂ | ಅಕ್ಷೋಭ್ಯ ತೀರಥರಾಕಂಡು ಭೇಟಿಯಾ ಮಾಡುತಲೇ ನಿಂದೂ | ಧೋಂಡೋ ರಘುನಾಥನಹೆಂಡತಿ ಗಂಡನ ಕೂಡಿಸಬೇಕೆಂದೂ | ಸುಮ್ಮನೆ ಕರೆತಂದೂ - ಪ್ರಚಡ ಸರ್ಪನಾ ರೂಪವ ತಾಳ್ದಂದೂ ಭಯವ ಪಟ್ಟರಂದೂ 3
ಮಧ್ವ ಶಾಸ್ತ್ರಗಳನುದ್ಧರಿಸುತಲದನಾ | ಟೀಕೆಯನೇ ಮಾಡೀವಿದ್ವಜ್ಜನರಿಗೆ ತಿದ್ದಿಯೆ ಪೇಳುತಲೀ |ನಾನಾ ಬಗೆಯಿಂದಲಿಪದ್ಧತಿ ತಿಳಿಸಿದ ಗುರುರಾಯರು ನೀವು | ಯತಿವರ ಸುರಧೇನುಅದ್ವೈತರ ಗುರು ವಿದ್ಯಾರಣ್ಯರ | ಗೆದ್ದ ಸಿಂಹ ನೀನೂ 4
ಆಷಾಢ ಬಹುಳ ಪಂಚಮಿಯೂ ಬರುತಾ ಕಳೆಬರವನೆ ಬಿಡುತಾವ್ಯಾಸ ವಿಠ್ಠಲನ ಪಾದದಲೇ ನಿರುತಾ | ಮಳಖೇಡದೊಳುವಾಸಿಪನೆಂಬೋ ಬಲು ಪ್ರಖ್ಯಾತಾ |ನಿಜಗುಣ ಗಣನೀತಾಬ್ಯಾಸರದಲೆ ಕೊಂಡಾಡಿದರೆ ನಿತ್ಯಾ | ಇಷ್ಟಾರ್ಥವನಿತ್ತಾ 5
A quantum of gratitude for this page! Its also a mode of Sri Hari seva!
ReplyDeleteHare Shrinivasa