Labels

Wednesday, 25 December 2019

ರಂಗವಲಿದ ದಾಸರಾಯ rangavalida dasaraya

ರಂಗವಲಿದ ದಾಸರಾಯ | ಸಾಧು
ಸಂಗವಿಡಿಸಿ ಕರುಣದಿ ಪಿಡಿ ಕೈಯ್ಯ ಪ
ಕುಂಭಿಣಿ ಸುರನಾಥ | ನಂಬಿದೆ ನಿನ್ನ ಪಾದ
ಬೆಂಬಿಡದಲೆ ಕಾಯೊ ||
ಸ್ತಂಭ ಮಂದಿರ | ಕಂಬು ಕಂಧರ
ಭಕ್ತಮಂದಾರ 1
ಹರಿಕಥೆ ಸುಧಾಸಾರ | ಸುರಸಗ್ರಂಥವ ಜಗದಿ |
ವಿರಚಿಸಿರುವ ನಿನ್ನ ||
ವರ ಉಪಕಾರ | ವರ್ಣಿಸಲಪಾರ |
ಪರಮೋದಾರ 2
ಸಾಮಗಾನ ವಿಲೋಲ | ಶಾಮಸುಂದರವಿಠಲ
ಸ್ವಾಮಿಯ ಭಕುತಿ | ನಿ |
ಸ್ಸಿಮ ಪ್ರಹ್ಲಾದ | ಅನುಜ ಸಲ್ಹಾದ
ನೀಡೆನಗಲ್ಹಾದ 3

No comments:

Post a Comment