Tuesday, 10 December 2019

ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು tappugalenisade ennappa kaayalebeku

ತಪ್ಪುಗಳೆಣಿಸದೆ ಎನ್ನಪ್ಪ ಕಾಯಲಿಬೇಕು
ಸರ್ಪಶಯನನ ದೂತಾ                               || ಪ ||
ಇಪ್ಪತ್ತೋಂದು ಕುಭಾಷ್ಯವ ಮುರಿದ ಸುಮತ ಪ್ರ
ವರ್ತಕ ರಾಘವೇಂದ್ರ – ಮುನಿಪ                 || ಅ ||
ಪ್ರತಿವರುಷ ಬಂದು ನುತಿಸಿ  ಪೋಗು ಎಂದು
ನತಸ್ವಪ್ನದಲಿ ನೀ ಬಂದು
ಹಿತದಿಂದ ಪೇಳಲು ರತನಾಗಿ ಧನದಿ ಮ
ರೆತುಬಿಟ್ಟೆ ನಿಮ್ಮನು – ಯತಿಕುಲೋತ್ತಮ            || ೧ ||
ಸ್ನಾನ ಸಂಧ್ಯಾನ ಸುಜಪತಪ ವ್ರತ ಹೋಮ
ಮೌನ ಮಾರ್ಗಗಳರಿಯೇ
ಜ್ಞಾನಿಗಳಾನುಸಂಧಾನಪೂರ್ವಕ ಪೂಜೆ
ಏನೂ ಮಾಡದೆ – ದುಷ್ಟಮಾನವರೊಳಗಿದೆ     || ೨ ||
ಏಸುಜನ್ಮದಿ ಬಂದ ದೋಷವ ಕಳೆದು ವಿ
ಶೇಷ ಸುಖವ ಕೊಡುವ
ಈ ಸುವಾರ್ತೆಯ ಕೇಳಿ ಮೊರೆಹೊಕ್ಕ ಗುರುಪ್ರಾ
ಣೇಶವಿಠ್ಠಲ
ನ ದೂತಾ – ಮತ್ಪ್ರೀತಾ                  || ೩ ||

No comments:

Post a Comment