Tuesday, 10 December 2019

ತಂಗಿ ನೀ ಕೇಳಿದ್ಯಾ ರಾಘವೇಂದ್ರಾಘಂಗಳ tangi nee kelidya raghavendrangagala

ತಂಗಿ ನೀ ಕೇಳಿದ್ಯಾ ರಾಘವೇಂದ್ರಾಘಂಗಳ ಕಳೆದು ಸುಖಂಗಳ ಕೊಡುವುದು
ತಂಗಿ ನೀ ಕೇಳಿದ್ಯಾ                || ಪ ||
ಶ್ರೀಪೂರ್ಣಭೋಧರ ಮತಪಯೋಬ್ಧಿಗೆ ಚಂದ್ರ
ತಾಪಸೋತ್ತಮರ ದಿವ್ಯಾಪಾರ ಮಹಿಮೆಯ        || ೧ ||
ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು
ಸಂಗೀತಮುಖದಿ ಜನಂಗಳು ಪಾಡುವುದು            || ೨ ||
ಕಿವಿಯಿಲ್ಲದವರಿಗೆ ತವಕದಿ ಕೊಟ್ಟರೆಂದು
ಸುವಿವೇಕ ಮನದಿಂದ ಕವಿಜನ ಪಾಡುವುದು        || ೩ ||
ಮಧ್ಯಸ್ತ್ರೀಯರು ಬಂದು ನಿಂದು ಆರಾಧಿಸೆ
ಸಂದೇಹವಿಲ್ಲ ಬಹುಮಂದಿಮಕ್ಕಳ ಕೊಟ್ಟ            || ೪ ||
ಗುರುಪ್ರಾಣೇಶವಿಠ್ಠಲ ಸರ್ವಕಾಮಿತಾರ್ಥವ
ಗುರುರಾಘವೇಂದ್ರರಲ್ಲಿ ನಿಂತು ನಿರುತದಿ ಕೊಡಿಸುವ        || ೫ ||

No comments:

Post a Comment