ಈತನೇ ಶ್ರೀ ಪ್ರಲ್ಹಾದನು ಆಹ್ಲಾದಕರನು || ಪ ||
ಈತನೇ ಪ್ರಹ್ಲಾದ ಜಗನ್ಮಾತಾಲಕುಮಿಪತಿಯ ಗುಣವ
ಭೂತಳದಲ್ಲಿ ತೋರಿ ಬಹು ನಿರ್ಭೀತಿಯಿಂದ ಮೆರೆದ ಗುರು || ಅ ||
ಈತನೇ ಪ್ರಹ್ಲಾದ ಜಗನ್ಮಾತಾಲಕುಮಿಪತಿಯ ಗುಣವ
ಭೂತಳದಲ್ಲಿ ತೋರಿ ಬಹು ನಿರ್ಭೀತಿಯಿಂದ ಮೆರೆದ ಗುರು || ಅ ||
ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆ
ಕಷ್ಟಬಡಿಸೆ ಸುತಗೆ ಜವದಲಿ
ಸೃಷ್ಟಿಗೊಡೆಯ ಸ್ಥಂಭದಿಂದ ದೃಷ್ಟನಾಗಿ ಅಸುರನಂದನ
ಶ್ರೇಷ್ಠ ನಖದಿಂ ಬಗೆಯೆ ಹರಿಯ ನಿಷ್ಠೆಯಿಂದ ನಮಿಸಿದ ಗುರು || ೧ ||
ಕಷ್ಟಬಡಿಸೆ ಸುತಗೆ ಜವದಲಿ
ಸೃಷ್ಟಿಗೊಡೆಯ ಸ್ಥಂಭದಿಂದ ದೃಷ್ಟನಾಗಿ ಅಸುರನಂದನ
ಶ್ರೇಷ್ಠ ನಖದಿಂ ಬಗೆಯೆ ಹರಿಯ ನಿಷ್ಠೆಯಿಂದ ನಮಿಸಿದ ಗುರು || ೧ ||
ಶೂರ ಬಾಲ್ಹೀಕನೆನಿಸಿದ ಬ್ರಹ್ಮಣ್ಯಮುನಿ ಪಾ
ದಾರವಿಂದ ದಯದಿ ಭಜಿಸಿದ
ಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾ
ಸಾರಪಾನ ಮಾಡಿ ವಿಬುಧ ಚಾರುಚಂದ್ರಿಕಾ ರಚಿಸಿದ ಗುರು || ೨ ||
ದಾರವಿಂದ ದಯದಿ ಭಜಿಸಿದ
ಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾ
ಸಾರಪಾನ ಮಾಡಿ ವಿಬುಧ ಚಾರುಚಂದ್ರಿಕಾ ರಚಿಸಿದ ಗುರು || ೨ ||
ಸಿಂಧುಶಯನ ಶ್ರೀರಮಾಪತಿವಿಠ್ಠಲನ ಭಕುತಿ
ಯಿಂದ ಭಜಿಪ ರಾಘವೇಂದ್ರ ಯತಿ
ಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತ
ವೃಂದವ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು || ೩ ||
ಯಿಂದ ಭಜಿಪ ರಾಘವೇಂದ್ರ ಯತಿ
ಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತ
ವೃಂದವ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು || ೩ ||
No comments:
Post a Comment