ಗುರುರಾಯ ಗುರುರಾಯ || ಪ ||
ದುರಿತ ಕಳೆಯೊ ದಯಾಸಾಂದ್ರ – ರಾಘವೇಂದ್ರ || ಅ ||
ದುರಿತ ಕಳೆಯೊ ದಯಾಸಾಂದ್ರ – ರಾಘವೇಂದ್ರ || ಅ ||
ನಮಿಸುವೆ ನಿನ್ನಡಿಗಮಿತ ವಿಧದಿ
ಮಮಶ್ರಮಗಳ ಕಳೆಯೊ ಹೇ ವಿಮಲಸುತೇಜ || ೧ ||
ಮಮಶ್ರಮಗಳ ಕಳೆಯೊ ಹೇ ವಿಮಲಸುತೇಜ || ೧ ||
ಆರ್ತಜನರ ಇಷ್ಟಾರ್ಥಗಳನ್ನೆಲ್ಲ
ಪೂರ್ತಿಗೊಳಿಸಿ ಕೃತಾರ್ಥರ ಮಾಡುವಿ || ೨ ||
ಪೂರ್ತಿಗೊಳಿಸಿ ಕೃತಾರ್ಥರ ಮಾಡುವಿ || ೨ ||
ಪವನರ ವರಮತಪ್ರವರನೆನಿಸಿ
ಶ್ರೀವರನರ್ಚಿಸುತಿಹ ಯತಿಕುಲತಿಲಕ || ೩ ||
ಶ್ರೀವರನರ್ಚಿಸುತಿಹ ಯತಿಕುಲತಿಲಕ || ೩ ||
ಸರ್ವತ್ರದಿ ಹರಿ ಇರುವುದ ನೋಡಿ
ಪೂರ್ವದೇವತೆಗಳ ಗರ್ವಹರನೆ ಮದ್ಗುರುರಾಯ || ೪ ||
ಪೂರ್ವದೇವತೆಗಳ ಗರ್ವಹರನೆ ಮದ್ಗುರುರಾಯ || ೪ ||
ನೀನೆ ಗತಿಯೊ ಹೇ ದೀನವತ್ಸಲನೆ
ಜ್ಞಾನವನು ಕೊಡು ನಾನೆಂಬುದ ಕಳೆ || ೫ ||
ಜ್ಞಾನವನು ಕೊಡು ನಾನೆಂಬುದ ಕಳೆ || ೫ ||
ಪತಿತನು ನಾ ನಿಮ್ಮತಿಶಯ ಗುಣಗಳ
ತುತಿಸಬಲ್ಲೆನೆ ಯತಿಕುಲವರ್ಯ || ೬ ||
ತುತಿಸಬಲ್ಲೆನೆ ಯತಿಕುಲವರ್ಯ || ೬ ||
ಮಾರುತಿವರದ ರಮಾಪತಿವಿಠ್ಠಲನ
ತಾರತಮ್ಯ ತಿಳಿಸ್ಯಾರಾಧನೆ ಕೊಡು || ೭ ||
ತಾರತಮ್ಯ ತಿಳಿಸ್ಯಾರಾಧನೆ ಕೊಡು || ೭ ||
No comments:
Post a Comment