Tuesday, 10 December 2019

ವಸುಧೆಯೊಳಗೆಣೆಗಾಣೆನೋ ಈ ಗುರುಗಳಿಗೆ vasudheyolagenegaaneno

ವಸುಧೆಯೊಳಗೆಣೆಗಾಣೆನೋ ಈ ಗುರುಗಳಿಗೆ
ಅಸುಪತಿ ಸಮದಿಂದ್ಯೆಶಸುವ ಕುಶಲರಿಗೆ        || ಪ ||
ಶ್ರೀರಮಣನ ಪಾದಸಾರಸಮಧುಪ
ಸೂರಿಜನ ವಿನುತ ಶ್ರೀರಾಘವೇಂದ್ರರಿಗೆ    || ೧ ||
ಬಂದ ಜನರಿಗಾನಂದಗರೆವ
ಕುಂದುರಹಿತ ಕಾಮನಂದಿಗಳೊಡೆಯರಿಗೆ        || ೨ ||
ದಿಟ್ಟ ವೆಂಕಟೇಶ ವಿಠ್ಠಲನ ಪಾದವ
ಮುಟ್ಟಿ ಭಜಿಪರೊಳು ಶ್ರೇಷ್ಠರೆನಿಸುವರಿಗೆ    || ೩ ||

No comments:

Post a Comment