Labels

Sunday, 1 December 2019

ಸಾಕು ಸಾಕು ಮನುಜಸೇವೆಯು saaku saaku Manujaseveyu

ಸಾಕು ಸಾಕು ಮನುಜಸೇವೆಯು, ರಂಗಯ್ಯ ಇನ್ನು ಪ
ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನುಬೇಕು ನಿನ್ನ ಪಾದಭಜನೆ ಕೊಟ್ಟು ಸಲಹೊ ರಂಗಯ್ಯ ಅ
ಹೊತ್ತರೆದ್ದು ಹೋಗಿ ಪರರ ಚಿತ್ತವೃತ್ತಿಯನ್ನು ತಿಳಿದುಹತ್ತರಿದ್ದು ಹಲವು ಕೆಲಸ ಭೃತ್ಯನಂತೆ ಮಾಡಿ - ರಿಕ್ತಹಸ್ತದಿಂದ ಮನೆಯ ಸೇರುವೆ - ಆಸೆಗಾಗಿಮತ್ತೆ ಕಂಡ ಕಡೆಗೆ ತೊಲಗುವೆ - ಬಂದು ಅಪರರಾತ್ರಿಯಲ್ಲಿ ತಿಂದು ಒರಗುವೆ ರಂಗಯ್ಯ ರಂಗ 1
ಸ್ನಾನ ಸಂಧ್ಯಾನುಷ್ಠಾನ ನೇಮವೆಲ್ಲ ತೊರೆದುಬಿಟ್ಟುಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿಶ್ವಾನನಂತೆ ದಿನವ ಕಳೆವೆನೊ - ದುರಾಸೆಯನ್ನುಮನಸಿನಲ್ಲಿ ಮಡಗಿಕೊಂಡು ಕುದಿವೆನೊಕೊನೆಗೂ ಎಳ್ಳುಕಾಳಿನಷ್ಟು ಸುಖವ ಕಾಣೆನೊ ರಂಗಯ್ಯ ರಂಗ2
ಒಡಲಿನಾಸೆಗಾಗಿ ನೊಣನು ತುಡುಕಿಬಿದ್ದು ಜೇನಕೊಡದಿಮಿಡುಕುವಂತೆ ಬಾಯಿಬಿಡುವೆ ಬಿಸರುಹಾಕ್ಷನೆಬಿಡಿಸು ಎನ್ನ ಬಂಧಪಾಶವ ಕಾಗಿನೆಲೆಯಾದಿಕೇಶವಕೊಡಿಸು ನಿನ್ನ ಭಕ್ತರ ಸಂಗವ - ಕನಕದಾಸನೊಡೆಯ ವೆಂಕಟಾದ್ರಿ ಮಾಧವ - ರಂಗಯ್ಯ ರಂಗ3

No comments:

Post a Comment