ಸಾಧು ಸಜ್ಜನ ಸತ್ಯಗುಣಕಿದಿರುಂಟೆಆದಿಕೇಶವನ ಪೋಲುವ ದೈವವುಂಟೆ ಪ
ಸತ್ಯವ್ರತವುಳ್ಳವಗೆ ಮೃತ್ಯುಭಯವುಂಟೆಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆವಿತ್ತವನರಸುವಂಗೆ ಮುಕ್ತಿಯೆಂಬುದುಂಟೆಉತ್ತಮರ ಸಂಗಕಿಂತಧಿಕ ಧರ್ಮವುಂಟೆ 1
ಸುತಲಾಭಕಿಂತಧಿಕ ಲಾಭವುಂಟೆಮತಿರಹಿತನೊಳು ಚತುರತೆಯುಂಟೆಪತಿಸೇವೆಗಿಂತಧಿಕ ಸೇವೆಯುಂಟೆಸತಿಯಿಲ್ಲದವಗೆ ಸಂಪದವೆಂಬುದುಂಟೆ 2
ಪಿಸುಣಗಿನ್ನಧಿಕ ಹೀನನುಂಟೆವಸುಧೆಯೊಳನ್ನದಾನಕೆ ಸರಿಯುಂಟೆಅಶನವ ತೊರೆದ ಯೋಗಿಗೆ ಭಯವುಂಟೆವ್ಯಸನಿಯಾದ ನೃಪನಿಗೆ ಸುಖವುಂಟೆ 3
ಧನಲೋಭಿಗಿನ್ನಧಿಕ ಹೀನನುಂಟೆಮನವಂಚಕ ಕಪಟಿಗೆ ನೀತಿಯುಂಟೆಸನುಮಾನಿಸುವ ಒಡೆಯಗೆ ಬಡತನವುಂಟೆವಿನಯವಾಗಿಹ ಸಂಗದೊಳು ಭಂಗವುಂಟೆ4
ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆಪರಮಸಾತ್ತ್ವಿಕ ಗುಣಕೆ ಪಿರಿದುಂಟೆಪರನಿಂದೆಗಿಂತಧಿಕ ಪಾತಕವುಂಟೆವರದಾದಿಕೇಶವನಲ್ಲದೆ ದೈವವುಂಟೆ 5
No comments:
Post a Comment