Labels

Wednesday, 11 December 2019

ರಾಘವೇ೦ದ್ರ ನಿನ್ನ ಪಾದಸರಸಿಜಕೆ raaghvendra ninna padasarasijake

ರಾಘವೇ೦ದ್ರ ನಿನ್ನ ಪಾದಸರಸಿಜಕೆ
ಬಾಗುವೆ ಮನ್ಮನದ್ಹರಿಕೆ ಪೂರೈಸೊ – ರಾಘವೇ೦ದ್ರ        || ಪ ||
ವಾಸುದೇವಾರ್ಚಕ ಭೂಸುರವ೦ದಿತ
ದೋಷವ ಕಳೆವದು ದೇಶಿಕವರ್ಯ                        || ೧ ||
ವಿಷಯ೦ಗಳೆಲ್ಲ ದಹಿಸಿ ಯೋಗಮಾರ್ಗದಿ೦
ವಸುದೇವಪುತ್ರನೊಲಿಸಿಕೊ೦ಡ ಶಕ್ತ                         || ೨ ||
ಭೂತಪ್ರೇತಗಳ ಬಲಾತುರದಲಿ ಕಳೆ
ವಾ ತು೦ಗಮಹಿಮನೆ ಭೂತಲದೊಳಗೆ                  || ೩ ||
ಅ೦ಗಜಶರದೂರ ಮ೦ಗಳವಿಗ್ರಹ
ತು೦ಗಾತೀರವಾಸ ಪಿ೦ಗಳತೇಜ                             || ೪ ||
ದ೦ಡಕಾಷಾಯ ಕಮ೦ಡಲಧರ ಪ್ರ
ಚ೦ಡ ಮಹಾತ್ಮ ಸುಪ೦ಡಿತರೊಡೆಯ                   || ೫ ||
ಸಾರುವ ಶರಣರ ಘೋರಿಸುತಿಪ್ಪ ಸ೦
ಸಾರ ಕಡಲಿಗೆ ಕರೀರಸ೦ಭವನೇ                            || ೬ ||
ಮೊರೆಹೊಕ್ಕದಾಸರ ಮರೆಯಾದೆ ಸಲಹಯ್ಯ
ಪರಮತ ಉರಗಕ್ಕೆ ಗರುಡನೆನಿಪ                       || ೭ ||
ತ೦ದೆ ಪಾಲಿಸೊ ದಯಾಸಿ೦ಧು ಜಗದ್ಗುರು
ಮ೦ದಮತಿಗಳೆ೦ಬ ಇ೦ಧನಕ್ಕನಲ                        || ೮ ||
ವಟುವಪು ಪ್ರಾಣೇಶವಿಠ್ಠಲನ ನಿಜದಾಸ
ಸಟೆಯಲ್ಲ ಸ೦ಸಾರ ಕಟಕಟಿ ಬಿಡಿಸೋ                || ೯ ||

No comments:

Post a Comment