Labels

Wednesday, 11 December 2019

ನಮಿಸಿ ಬೇಡುವೆ ವರಗಳ ನಿನ್ನ namisi beduve nvaragala ninna

ನಮಿಸಿ ಬೇಡುವೆ ವರಗಳ ನಿನ್ನ
ಸ೦ಯಮಿ ಕುಲೋತ್ತಮ ರಾಘವೇ೦ದ್ರ ರನ್ನ        || ಪ ||
ವಿಮಲ ಸುಮತಿ ಜನರತಿಪ್ರೀಯಾ – ಪಾದ
ಕಮಲಗಳಿಗೆರಗುವೆನೊ ಜೀಯಾ
ಶಮಲ ಮಾರ್ಗದಲಿ ನೀ ನೀಯದಿರೊ ಮತಿಯ
ಅಮಿತ ಕರುಣದಿ ಪಿಡಿಯೋ ಕೈಯ್ಯ        || ೧ ||
ಕ೦ಡಕ೦ಡವರನು ಬೇಡಿ ನೊ೦ದೆ ಕ
ಮ೦ಡಲು ದ೦ಡಧಾರಿ ನೀ ಗತಿಯೆ೦ದೆ
ಪ೦ಡಿತಾಗ್ರಗಣ್ಯ ಇನ್ಯಾರು ಮು೦ದೆ ಕೋ
ದ೦ಡಪಾಣಿಯ ಪಾದ ತೋರಿಸು ತ೦ದೆ        || ೨ ||
ಶ್ರೀ ಸುಧೀ೦ದ್ರ ಯತಿಕರಕ೦ಜಜಾತ ತು೦
ಗಾಸುನದಿನಿಲಯಾ ಅಘಾ೦ಬುಧಿ ಪೋತ
ವಾಸುಕಿಶಯನ ಜಗನ್ನಾಥ ವಿಠ್ಠಲ
ದಾಸರ ಪೋಷಕ ಲಾಲಿಸಿ ಪೋತಾ        || ೩ ||

No comments:

Post a Comment