ಗುರು ರಾಘವೇಂದ್ರನೆ ಕರುಣಿ ನೋಡಬಾರದೆ
ಮೊರೆ ಯಾರಿಗಿಡಲೋ ಕರುಣಾಶರಧೇ || ಪ ||
ಮೊರೆ ಯಾರಿಗಿಡಲೋ ಕರುಣಾಶರಧೇ || ಪ ||
ಸ್ಮರಿಸಿದವರ ಪೊರೆವೆನೆಂಬ ಬಿರುದು ನಿನ್ನದೆ
ವರ ಶರಣರ ಕಲ್ಪತರುವೆ ಎನ್ನ್ಯಾಕೆ ಮರೆತೆ || ೧ ||
ವರ ಶರಣರ ಕಲ್ಪತರುವೆ ಎನ್ನ್ಯಾಕೆ ಮರೆತೆ || ೧ ||
ಕರವ ಮುಗಿದು ನಮಿಸಿ ನಿಮಗೆ ಬಾಯಿ ತೆರೆದೆ ಇದು
ಸರಿಯೆ ನಿನ್ನ ಮನಸು ಲೇಶವಾದರು ಕರಗದೆ || ೨ ||
ಸರಿಯೆ ನಿನ್ನ ಮನಸು ಲೇಶವಾದರು ಕರಗದೆ || ೨ ||
ಸತತ ಎನ್ನವಗುಣಗಳನ್ನು ಮನಕೆ ತಾರದೆ ನೀ ಬಂದು
ಪೊರೆಯೊ ರಘುನಾಥವಿಠ್ಠಲನ ಕೃಪೆಯು ಬಾರದೆ || ೩ ||
ಪೊರೆಯೊ ರಘುನಾಥವಿಠ್ಠಲನ ಕೃಪೆಯು ಬಾರದೆ || ೩ ||
No comments:
Post a Comment