Tuesday, 10 December 2019

ಗುರು ರಾಘವೇಂದ್ರನೆ ಕರುಣಿ ನೋಡಬಾರದೆ guru raghavendrane karuni nodabaarade

ಗುರು ರಾಘವೇಂದ್ರನೆ ಕರುಣಿ ನೋಡಬಾರದೆ
ಮೊರೆ ಯಾರಿಗಿಡಲೋ ಕರುಣಾಶರಧೇ        || ಪ ||
ಸ್ಮರಿಸಿದವರ ಪೊರೆವೆನೆಂಬ ಬಿರುದು ನಿನ್ನದೆ
ವರ ಶರಣರ ಕಲ್ಪತರುವೆ ಎನ್ನ್ಯಾಕೆ ಮರೆತೆ    || ೧ ||
ಕರವ ಮುಗಿದು ನಮಿಸಿ ನಿಮಗೆ ಬಾಯಿ ತೆರೆದೆ ಇದು
ಸರಿಯೆ ನಿನ್ನ ಮನಸು ಲೇಶವಾದರು ಕರಗದೆ        || ೨ ||
ಸತತ ಎನ್ನವಗುಣಗಳನ್ನು ಮನಕೆ ತಾರದೆ ನೀ ಬಂದು
ಪೊರೆಯೊ ರಘುನಾಥವಿಠ್ಠಲನ ಕೃಪೆಯು ಬಾರದೆ    || ೩ ||

No comments:

Post a Comment