Labels

Thursday, 12 December 2019

ಅಣುವಾಗಬಲ್ಲ ಮಹತ್ತಾಗಬಲ್ಲ anuvaagaballa

ಅಣುವಾಗಬಲ್ಲ ಮಹತ್ತಾಗಬಲ್ಲ |
ಅಣುಮಹತ್ತೆರಡೊಂದಾಗ ಬಲ್ಲ
ರೂಪವಾಗಬಲ್ಲ ಅಪರೂಪವಾಗ ಬಲ್ಲ
ರೂಪ-ಅಪರೂಪವೆರಡೊಂದಾಗಬಲ್ಲ |
ವ್ಯಕ್ತನಾಗಬಲ್ಲ ಅವ್ಯಕ್ತನಾಗಬಲ್ಲ
ವ್ಯಕ್ತ ಅವ್ಯಕ್ತ ಎರಡೊಂದಾಗ ಬಲ್ಲ |
ಸುಗುಣನಾಗಬಲ್ಲ ನಿರ್ಗುಣನಾಗಬಲ್ಲ |
ಸುಗುಣ ನಿರ್ಗುಣ ಎರಡೊಂದಾಗಬಲ್ಲ |
ಅಘಟಿತ ಘಟಿತ ಅಚಿಂತ್ಯಾದ್ಭುತ ಮಹಿಮ |
ಸ್ವಗತ ಭೇದವಿವರ್ಜಿತ ಪುರಂದರವಿಠಲ 1
ಮಟ್ಟತಾಳ
ಕಣ್ಣಲಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ರಸನದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ಸ್ಪರುಶದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ಶ್ರವಣದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ಘ್ರಾಣದಿ ಕೇಳ್ವ ಕಾಂಬ ಅರಿವ, ಆಘ್ರಾಣಿಸುವ ಆಸ್ವಾದಿಸುವ |
ಲೋಕ ವಿಲಕ್ಷಣ ದಿವ್ಯ ಕರಣ ಲೋಕಕೆ
ಆಶ್ಚರ್ಯ ಪುರಂದರವಿಠಲ 2
ತ್ರಿವಿಡಿತಾಳ
ಆವಾವ ಯುಗದಲ್ಲಿ ವಿಷ್ಣು ವ್ಯಾಪಕನಾಗಿ
ಆ ವಿಷ್ಣುವಿಂದಲೆ ವಿಷ್ಣುಲೋಕ ತಾನಿಪ್ಪುದಾಗಿ |
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ |
ಸಾರಿಷ್ಣ ಎಂಬುದು ವಿಷ್ಣುವಿನಲಿಪ್ಪುದಾಗಿ |
ನಮ್ಮ ಪುರಂದರವಿಠಲ ಬೊಮ್ಮ ಭರಿತ |
ಪಂಚವಿಧ ಮುಕುತಿದಾಯಕನು 3
ಅಟತಾಳ
ಮೋದ ದಕ್ಷಿಣಪಕ್ಷ ಪ್ರಮೋದ ಉತ್ತರಪಕ್ಷ |
ಆನಂದ ಆತುಮ ಆನಖ ಆಪಾದ |
ಅಪ್ರಾಕೃತವಿಗ್ರಹ ನಮ್ಮ ಪುರಂದರವಿಠಲ 4
ಏಕತಾಳ (ಆದಿತಾಳ)
ನಾರಾಯಣ ಪರಬ್ರಹ್ಮ ಶ್ವೇತತನೂರುಹ ಬಲಭದ್ರ ಗಡ |
ಕೃಷ್ಣತನೂರುಹ ಕೃಷ್ಣ ಗಡ |
ವಾಸುದೇವ ಸಂಕರ್ಷಣ ಪ್ರದ್ಯಮ್ನ ಅನಿರದ್ಧ ನಾರಾಯಣ ಹರೇ
ಶ್ವೇತ ತನೂರುಹ ಪುರಂದರ ವಿಠಲ 5
ಜತೆ
ನಮೋ ನಮೋ ವಾಗೀಶಾ ಈಶ ಸರ್ವೇಶ |
ನಮೋ ನಮೋ ಪುರಂದರವಿಠಲ ಶೇಷಶಯ್ಯ ||

No comments:

Post a Comment