ಅಚ್ಯುತಾನಂತಗೋವಿಂದ ಮುಕುಂದ |
ವಾಮನ ವಾಸುದೇವ ನಾರಾಯಣ ಹರಿ |
ಸಚ್ಚದಾನಂದ ಸ್ವರೂಪ ಗೋಪಾಲ ಪುರುಷೋತ್ತಮ |
ಪರಂಧಾಮ ನಾರಾಯಣ |
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ |
ಭಾರ್ಗವ ರಾಮ ಶ್ರೀಕೃಷ್ಣ ಬೌದ್ಧ ಕಲ್ಕಿ |
ಅವತಾರ ಅನಂತಾವತಾರ ನಾರಾಯಣ |
ಹರಿ ಅಚ್ಯುತಾನಂತ ಗೋವಿಂದ |
ಅಪಾರ ಮಹಿಮ ಶ್ರೀ ನಾರಾಯಣ ಅಹೋ |
ಸರ್ಪಶಯನನೆ ನಾರಾಯಣ |
ಶ್ರೀ ಪುರಂದರವಿಠಲ ವಿಭುವೆ ತಿರುವೆಂಗಳಪ್ಪ |
ಎನ್ನಪ್ಪ ನೀ ನಾರಾಯಣ 1
ಮಟ್ಟತಾಳ
ಮಂಗಳಂಗ ನಿನ್ನಂಗವಟ್ಟದಲ್ಲಿ ಸಂಗಸಖಳಿಪ್ಪಳವ್ವೆ ನಿ- |
ನ್ನಂಗನೆಯು ಲಚುಮವ್ವೆ ಕೆಂಬರಳಾಗಿಪ್ಪಳವ್ವೆ |
ಬಂಗಾರವಾಗಿಪ್ಪಳವ್ವೆ ಶೃಂಗಾರವಾಗಿಪ್ಪಳವ್ವೆ |
ರಂಗ ಶ್ರೀಪುರಂದರವಿಠಲ ನಿನ್ನೊಲಿದು 3
ತ್ರಿವುಡೆ ತಾಳ
ಉಟ್ಟದಟ್ಟಿ ಕಟ್ಟಿದ ಕಠಾರಿ ತೊಟ್ಟಂಬು ತೋರಗದೆ ತೋಮರÀ |
ಮೆಟ್ಟಿದ ತಡಿಕೆರವಿನ ಹೆಜ್ಜೆ ಕಟ್ಟಿದ ಕಾಲುಗೆಜ್ಜೆ ಶ್ರೀ ವತ್ಸ |
ಸೃಷ್ಟಿರಕ್ಷಕ ಪುರಂದರವಿಠಲ ಬೆಟ್ಟದ ತಿರುವೆಂಗಳಪ್ಪಗೆ
ನಮೋ ನಮೋ 3
ಅಟತಾಳ
ಇದೆ ದನುಜಮರ್ದನ ಚಕ್ರಹಸ್ತ - ಮ- |
ತ್ತಿದೆ ವೇದನುತ ಶಂಖಹಸ್ತ |
ಇದೆ ಈರೇಳು ಜಗವನೊಲಿದಿಂಬಿಟ್ಟು ಮೆರೆವ ಹಸ್ತ |
ಇದೆ ಇದೆ ವೈಕುಂಠವೆಂದು ತೋರುವ ಹಸ್ತ |
ಇದೆ ಪುರದರವಿಠಲನಿದ್ದಿರವು ಮತ್ತಿದೆ |
ತಿರುವೆಂಗಳಪ್ಪನ ಮೂರುತಿ ಇದೆ 4
ಆದಿತಾಳ
ಕಿರೀಟ ಕುಂಡಲಧರನ ಕಂಡೆ
ಹಾರಮಣಿ ಭೂಷಣನ ಕಂಡೆ |
ಸಿರಿಯಿಪ್ಪÀ ವಕ್ಷಸ್ಥಳವ ನಾಕಂಡೆ |
ವರಾಂಬರನ ಕಂಡೆ ವರದೇಶನ ಕಂಡೆ |
ತಿರುಮಲಗಿರಿಯಲಿ ಸಿರಿ ಪುರಂದರವಿಠಲನ |
ಇರುವ ನಾಕಂಡೆ ಚೆಲುವನ ನಾಕಂಡೆ 5
ಜತೆ
ತಿರುವೆಂಗಳಪ್ಪ ಪುರಂದರವಿಠಲ |
ನೆರೆ ನಂಬಿದೆನೊ ನಿನ್ನ ಚರಣಕವಲವ ||
No comments:
Post a Comment