Labels

Friday, 13 December 2019

ಆಪಾದವಾನಂದ ಆನಖವಾನಂದ aapaadvanaand aanakhanand

ಆಪಾದವಾನಂದ ಆನಖವಾನಂದ |
ಆಜಾನು ಆಜಂಘೆ ಆನಂದಮಯಮಯ್ಯ |
ಆ ಊರು ಆನಂದ ಆ ಕಟಿ ಆನಂದ |
ಆನಾಭಿ ಆ ಕುಕ್ಷಿ ಆನಂದಮಯವಯ್ಯ |
ಆ ಉರ ಆನಂದ ಆ ಭುಜವಾನಂದ |
ಆ ಕÀಂಬುಗ್ರೀವ-ಮುಖ ಆನಂದಮಯವಯ್ಯ |
ಆಶಿರೋರುಹಗಳು ಆನಂದಮಯವಯ್ಯ |
ಅಸಂಖ್ಯ ಆನಮದ ಪುರಂದರವಿಠಲ 1
ಮಟ್ಟತಾಳ
ಪಾವಕ-ಕೋಟಿ ಸೂರ್ಯರ ಪ್ರಭೆಯ ಸೋಲಿಸುವ |
ದೇವನಂಗಕಾಂತಿ ಆನಂದಮಯವಯ್ಯ |
ದೇವರಾಟ್ ಶ್ರೀಪುರಂದರವಿಠಲ | 2
ತ್ರಿವಿಡೆತಾಳ
ದಶಮಾತುರಗಳು ಆನಂದಮಯವಯ್ಯ |
ಹೃಷೀಕೇಶನ ಏಕಾದಶ ಹೃಷೀಕ ಆನಂದಮಯವಯ್ಯ |
ಮಹಾಭಾವ ಭೂವಿಲಾಸ ದೇವನಂಗ ಕಾಂತಿ
ಆನಂದಮಯವಯ್ಯ| |
ದೇವರಾಟ್ ಸಿರಿ ಪುರಂದರವಿಠಲ 3
ಅಟತಾಳ
ಬೊಮ್ಮ ಬೊಮ್ಮ ಬೊಮ್ಮ ಶ್ರೀಹರಿಯ |
ಕರ್ಮವಾನಂದ ಕರಣಗಳಾನಂದ |
ಹಮ್ಮು ಆನಂದ ಹಾಸ್ಯವಾನಂದ |
ಕಂಗಳಾನಂದ ನಮ್ಮ ಪುರಂದರ ವಿಠಲರಯನ |
ದಿವ್ಯ ಕೋಪವಾನಂದ 4
ಏಕತಾಳ
ಅನಂದವರ್ಧಾಂಗಿ ಆನಂದನ ಕುಮಾರ |
ಆನಂದ ಮೂರುತಿಯ ಅಗಲದೆ ಇರಿ |
ಆನಂದ ಆನಂದ ಪರಮಾನಂದ |
ಪರಮಾನಂದ ಪುರಂದರವಿಠಲ 5
ಜತೆ
ಙÁ್ಞನ ವಿಙÁ್ಞನ ಸುಗಂಧ ಸುಖದೇಹ |
ಅನಂದಮಯವಯ್ಯ ಪುರಂದರವಿಠಲನ ಅವಯವಗಳೆಲ್ಲ ||

No comments:

Post a Comment