Labels

Saturday, 12 October 2019

ಯಾಕೆ ದಯಬಾರದೊ Yaake Dayabarado

ಯಾಕೆ ದಯಬಾರದೊ ಕಾಂತೇಶ ಪ್ರಾಣೇಶ
ಸಾಕಲಾರದೆ ಪೋದೆಯಾ ಎನ್ನನು ||pa||
ಏಕಚಿತ್ತದಿ ನಿನ್ನ ಚರಣ ನಂಬಿ ಬರಲು
ನೂಕುವುದುಚಿತವೇ ಶ್ರೀ ಭಾರತೀಶ ||a.pa||
ತೊಳಲಿ ಬಳಲಿ ಸುಖ ಸುಳಿವೆಂಬೋದರಿಯದೆ
ನಳಿನಾಕ್ಷನ ದಾಸ ನಿನ್ನ ಕೀರ್ತಿ
ಇಳೆಯೆಲ್ಲ ಪೊಗಳಲು ಸಲಹುವನೆಂತೆಂದು
ಬಳಿಗೆ ಬರಲು ಮನಕರಗದೆ ತಂದೆ ||1||
ಅಂದು ಕನಸಿನಲ್ಲಿ ಶಿರದಲ್ಲಿ ಕರವಿಟ್ಟೆ
ಇಂದೆಲ್ಲಿ ಪೋಯಿತೊ ಆ ಕರುಣ
ತಂದೆ ಮುದ್ದುಮೋಹನ ಗುರುಗಳ ವಚನವ
ತಂದಾದರೂ ಇಂದು ಒಲಿದೆನ್ನ ಕಾಯೊ||2||
ವಿೂಸಲ ದಾಸ್ಯಕೆ ಆಶೆ ಮಾಡಿದೆನೆಂದು
ದೋಷವೆಣಿಸುವರೆ ಎನ್ನಲಿ ನೀ
ಶೇಷಶಯನನೆ ಬಲ್ಲೆನೊ ಇದರ ಮರ್ಮ
ಘಾಸಿಗೊಳಿಸದೆ ನೀ ಅಭಯವನೀಯೊ ||3||
ರಾಮದಾಸ್ಯವ ಬಯಸಿ ನೇಮದಿಂದಲಿ ಇದ್ದು
ರಾಮನಾಗಮ ಕಂಡು ಎರಗಿ ನಿಂದು
ಭೂಮಿಜೆ ಪತಿ ಪಾದ ದಾಸ ಸಿದ್ಧಿಯ ಪಡೆದು
ಭೂಮಿಯೊಳು ಖ್ಯಾತನಾದೆಯೊ ಆಂಜನೇಯ ||4||
ಚಿತ್ತಿದಿ ಕೃಷ್ಣನ ದಾಸತ್ವ ಸಾಧಿಸ
ಮತ್ತೆ ಮುನಿಯಾಗಿ ಗ್ರಂಥವ ರಚಿಸಿ
ಚಿತ್ತದಿ ಗೋಪಾಲಕೃಷ್ಣವಿಠ್ಠಲನ ಪಾದ
ನಿತ್ಯದಿ ಭಜಿಪೆ ನೀ ಮತ್ತೆನ್ನ ಕಾಯೊ ||5||

No comments:

Post a Comment