Labels

Friday, 11 October 2019

ನೋಡಿರಯ್ಯ ಹನುಮಂತನ Nodirayya Hanumantana

ನೋಡಿರಯ್ಯ ಹನುಮಂತನ ಮಹಿಮೆಯ
ಬೇಡಿರೋ ವರಗಳನು || ಪಲ್ಲವಿ ||
ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ
ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ || ಅನು ಪಲ್ಲವಿ ||
ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ
ಚಂದದಿಂದಪ್ಪನೆಂದು ಅಂದದಿಂ ವಿಶ್ವಾಮಿತ್ರ
ತಂದು ರಘುರಾಮನಿಗೊರೆಯಲಂದು ಯಾಗವ ಕಾಯ್ದ
ಸುಂದರ ರಾಮನಿಗೆ ವಂದನೆಗೈವನೀತ || ೧ ||
ಧೀರನಾಗಿ ಧನುವ ಮುರಿದು ಮೆರೆದು ದಂಡಕವ
ಸೇರಿ ಘೋರ ರಕ್ಕಸರ ಸದೆದು ಜರಿದು ತಂದು ಕಪಿಪತಿಯೊಡನೆ
ಸೇರಿ ಸಖ್ಯವನ್ನೆ ಮಾಡಿ ಧಾರಿಣಿಯೊಳಗೆ ಕಡು
ನಾರಿಯನ್ನೆ ಹುಡುಕಿಸಿದ ಧೀರ ರಾಮದೂತನೀತ || ೨ ||
ಖ್ಯಾತಿಯಿಂದ ಸೇತುವೆಯನು ಕಟ್ಟಿ ಮೆಟ್ಟಿ ರಾವಣ ಪಡೆಯ
ಭೂತಳದೊಳು ಕೆಡಹಿಬಿಟ್ಟು ಮಹಾಂತದೊಳು
ಈತನೆಂದು ಸೇರಿ ಬಂದು ವಾತತನುಜನೆಮ್ಮ ಬಹು
ಪ್ರೀತಿಯಿಂದ ಪುರಂದರವಿಠಲನ್ನ ದಾಸನಾದ || ೩ ||

No comments:

Post a Comment