Labels

Thursday, 17 October 2019

ನೀನೆ ಗತಿ ಕೃಷ್ಣಾ Neene gati krishna

ನೀನೆ ಗತಿ ಕೃಷ್ಣಾ ಎನಗೆ ನೀನೆ ಗತಿ ಕೃಷ್ಣ. ||ಪ||
ನೀನೆ ಗತಿಯೆಂದಾನತನಾಗಿ
ಮಾನಾಪಮಾನವ ನಿನಗೊಪ್ಪಿಸಿದೆ
ಜ್ಞಾನವಿಹೀನನ ಪಾವನಮಾಡಿ
ಶ್ರೀ ನರಹರಿ ಕರುಣಿಸೊ ನಮ್ಮಯ್ಯನೆ ||೧||
ತನುವಸ್ಥಿರ ಮನವತಿಚರ ಒದಗಿದ
ಧನ ನಶ್ವರ ನಿನ್ನಯ ಪಾದಾಬ್ಜದ
ನೆನವಿಗೆಯೊಂದನೆ ಕೊಡುಕಡೆ ಮೊದಲಿಗೆ
ಜನನವಸಾನದ ಬಳ್ಳಿಯ ಕಡಿಯಲು ||೨||
ಶರಣಾಗತ ಶರಣರಕರಪಿಡಿವಾ
ಬಿರುದಿನ ದೊರೆಗಿನ್ನನುಮಾನ್ಯಾಕೆ
ಪರಮಪತಿತನ ಪೂತನ ಮಾಡ್ಯು
ದ್ಧರಿಸುವ ಸಿರಿ ಪ್ರಸನ್ವೆಂಕಟ ಕೃಷ್ಣ. ||೩||

No comments:

Post a Comment