ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವ
ಸುಮಹಾತ್ಮ ನಿನಗೆಣೆ ಲೋಕದೊಳಗಾವ ತ್ರಿಭುವನ ಸಂಜೀವಾ
ಉಮೆಯರಸ ಹೃತ್ಕಮಲದ್ಯುಮಣಿ
ಮಾ ರಮಣ ಕನಕ ಸಂಯಮಿವರವರದಾ ||ಪ||
ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕಶರಣ್ಯ
ಶಫರಕೇತುಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯ
ಕಶಿಪುತನಯನ ಕಾಯ್ದೆಪೆನೆನುತಲಿ
ನಿಷ್ಕಪಟ ಮನುಜಹರಿವಪುಷ ನೀನಾದೆ ||೧||
ವೇದವೇದಾಂಗವೇದ್ಯ ಸಾಧ್ಯ ಅಸಾಧ್ಯ
ಶ್ರೀದ ಮುಕ್ತಾಮುಕ್ತಾರಾಧ್ಯ
ಅನುಪಮ ಅನವದ್ಯ ಮೋದಮಯನೆ ಪ್ರಹ್ಲಾದ
ವರದ ನಿತ್ಯೋದಯ ಮಂಗಳ ಪಾದಕಮಲಕೆ ||೨||
ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ
ನಿನಗೆ ಬಿನ್ನೈಪೆ ಎನ್ನಯ ಮಾತ ಲಾಲಿಸುವದು ತಾತ
ಗಣನೆಯಿಲ್ಲದವಗುಣವೆನಿಸಿದೆ ಪ್ರತಿ
ಕ್ಷಣಕೆ ಕಥಾಮೃತ ಉಣಿಸು ಕರುಣದಿ
ಸುಮಹಾತ್ಮ ನಿನಗೆಣೆ ಲೋಕದೊಳಗಾವ ತ್ರಿಭುವನ ಸಂಜೀವಾ
ಉಮೆಯರಸ ಹೃತ್ಕಮಲದ್ಯುಮಣಿ
ಮಾ ರಮಣ ಕನಕ ಸಂಯಮಿವರವರದಾ ||ಪ||
ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕಶರಣ್ಯ
ಶಫರಕೇತುಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯ
ಕಶಿಪುತನಯನ ಕಾಯ್ದೆಪೆನೆನುತಲಿ
ನಿಷ್ಕಪಟ ಮನುಜಹರಿವಪುಷ ನೀನಾದೆ ||೧||
ವೇದವೇದಾಂಗವೇದ್ಯ ಸಾಧ್ಯ ಅಸಾಧ್ಯ
ಶ್ರೀದ ಮುಕ್ತಾಮುಕ್ತಾರಾಧ್ಯ
ಅನುಪಮ ಅನವದ್ಯ ಮೋದಮಯನೆ ಪ್ರಹ್ಲಾದ
ವರದ ನಿತ್ಯೋದಯ ಮಂಗಳ ಪಾದಕಮಲಕೆ ||೨||
ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ
ನಿನಗೆ ಬಿನ್ನೈಪೆ ಎನ್ನಯ ಮಾತ ಲಾಲಿಸುವದು ತಾತ
ಗಣನೆಯಿಲ್ಲದವಗುಣವೆನಿಸಿದೆ ಪ್ರತಿ
ಕ್ಷಣಕೆ ಕಥಾಮೃತ ಉಣಿಸು ಕರುಣದಿ
No comments:
Post a Comment