Labels

Tuesday, 8 October 2019

ಕೋಮಲೆ ರಮಾದೇವಿಯ Komal ramadevi

ಕೋಮಲೆ ರಮಾದೇವಿಯ ನೋಡಬನ್ನಿರೇ
ಕಮಲಾರಿ ಸಹೋದರಿಯನೀಗ ಬೇಡಬನ್ನಿರೇ ॥ಪ॥
ಇಂದುನಿಭದ ಸುಂದರಿಯರು ಬಂದು ನೋಡಿರೆ
 ಕುಂದರದನೆ ಮಂದರೋದ್ಧರನರ್ಧಾಂಗಿಯೇ ॥೧॥
ಭಕ್ತಿಯಿಂದ ಭಜಿಪರಿಗೆ ಮುಕ್ತಿ ಕೊಡುವಳೇ
ಶಕ್ತಿ ಯುಕ್ತಿಗಳನೆ ಕೊಟ್ಟು ಆರತಿ ಮಾಳ್ಪಲೇ ॥೨॥
ದಾಸರಾದರೆ ಶ್ರೀಶನ ರಾಣಿ ಪೋಷಿಸುವಳೇ
ಗೋಪಾಲವಿಠಲ ಘಾಸಿಮಾಡದೆ ಪೋಷಿಸೆನುವಳೇ ॥೩॥

No comments:

Post a Comment