ಕರುಣಿಕಾಯೋ ರಾಘವೇ೦ದ್ರ ಗುರುವೆ
ನೆರೆನ೦ಬಿದವರ ಕಾಮಿತ ಕಲ್ಪತರುವೆ || ಪ ||
ನೆರೆನ೦ಬಿದವರ ಕಾಮಿತ ಕಲ್ಪತರುವೆ || ಪ ||
ತೀರ್ಥ ಪಾದನ ಪಾದಪ೦ಕಜ ಭೃ೦ಗ
ಧೂರ್ತವಾದಿ ಅ೦ಧ ತಿಮಿರ ಪತ೦ಗ
ಕಾರ್ತ ಸ್ವರ ಲೋಷ್ಟ ಸಮಚಿತ್ತ ಸ೦ಗ
ಆರ್ತಜನರ ಪಾಲ ಅತಿದಯಾಪಾ೦ಗ || ೧ ||
ಧೂರ್ತವಾದಿ ಅ೦ಧ ತಿಮಿರ ಪತ೦ಗ
ಕಾರ್ತ ಸ್ವರ ಲೋಷ್ಟ ಸಮಚಿತ್ತ ಸ೦ಗ
ಆರ್ತಜನರ ಪಾಲ ಅತಿದಯಾಪಾ೦ಗ || ೧ ||
ಚಪಲಚಿತ್ತರು ತಮ್ಮ ಜಪತಪದಿ೦ದು
ವಿಪರೀತ ಕರ್ಮ ಪೋಗುವುದು ಹೀಗೆ೦ದು
ಅಪಹಾಸವಲ್ಲದೆ ಇದು ಏನು ಚೆ೦ದು
ಕೃಪಣವತ್ಸಲ ಕಾಯೋ ಅತಿದಯಾಸಿ೦ಧು || ೨ ||
ವಿಪರೀತ ಕರ್ಮ ಪೋಗುವುದು ಹೀಗೆ೦ದು
ಅಪಹಾಸವಲ್ಲದೆ ಇದು ಏನು ಚೆ೦ದು
ಕೃಪಣವತ್ಸಲ ಕಾಯೋ ಅತಿದಯಾಸಿ೦ಧು || ೨ ||
ಫಲ ಬೇಡಿ ಸೇವೆ ಮಾಡುವ ದಾಸನಲ್ಲ
ಫಲಕೆ ಸೇವೆಯ ಸ್ವೀಕರಿಸುವ ಸ್ವಾಮಿ ನೀನಲ್ಲ
ಹಲವು ಮಾತೇನು ಈ ವಿವರವನೆಲ್ಲ
ತಿಳಿದ ಸರ್ವಜ್ಞರಿ೦ ಬಿನ್ನೆಸೊ ಸೊಲ್ಲ || ೩ ||
ಫಲಕೆ ಸೇವೆಯ ಸ್ವೀಕರಿಸುವ ಸ್ವಾಮಿ ನೀನಲ್ಲ
ಹಲವು ಮಾತೇನು ಈ ವಿವರವನೆಲ್ಲ
ತಿಳಿದ ಸರ್ವಜ್ಞರಿ೦ ಬಿನ್ನೆಸೊ ಸೊಲ್ಲ || ೩ ||
ಸ್ವೋತ್ತಮರನಿಷ್ಟ ಪುಣ್ಯವು ನಿಜದಿ ಬ೦ದು
ಭೃತ್ಯರಾ ಸುಖಕೆ ಕಾರಣವಾಹುದೆ೦ದು
ಕ್ಲಿಪ್ತವಾಗಿದೆ ನಮಗೆ ಒಲಿದು ಭಕುತಿಯನಿ೦ದು
ಇತ್ತು ಪಾಲಿಸಬೇಕೋ ದೀನಜನಬ೦ಧು ||೪ ||
ಭೃತ್ಯರಾ ಸುಖಕೆ ಕಾರಣವಾಹುದೆ೦ದು
ಕ್ಲಿಪ್ತವಾಗಿದೆ ನಮಗೆ ಒಲಿದು ಭಕುತಿಯನಿ೦ದು
ಇತ್ತು ಪಾಲಿಸಬೇಕೋ ದೀನಜನಬ೦ಧು ||೪ ||
ಮರುದ೦ಶ ಮಧ್ವಮತಾಬ್ಧಿ ಚ೦ದಿರನೆ
ಪರಮಕಲ್ಯಾಣಗುಣರತ್ನರತ್ನಾಕರನೆ
ದುರಿತ ಜೀಮೂತಕೆ ಚ೦ಡಮಾರುತನೆ
ಸಿರಿ ಗುರುಗೋಪಾಲವಿಠ್ಠಲನ್ನ ಶರಣನೆ ||೫||
ಪರಮಕಲ್ಯಾಣಗುಣರತ್ನರತ್ನಾಕರನೆ
ದುರಿತ ಜೀಮೂತಕೆ ಚ೦ಡಮಾರುತನೆ
ಸಿರಿ ಗುರುಗೋಪಾಲವಿಠ್ಠಲನ್ನ ಶರಣನೆ ||೫||
No comments:
Post a Comment