Labels

Monday, 7 October 2019

ಇಂದ್ರಗೋಪದಂತೆ Indragopadante

ಇಂದ್ರಗೋಪದಂತೆ ವರ್ನದಿಂದೊಪ್ಪುವ|
ಅಂದವಾದ ದಿಗ್ವಿಜಯ ರಾಮಾ|
ಚಂದ್ರ ಭಕ್ತ ಚಕೋರ ಮಾನವ ಮನುಜ ಲೀಲಾ|
ಸಂದರುಶನ ಮಾತ್ರದಿಂದ ಲಾಭಾ|
ಸಂದೋಹ ಕೊಡುವನೆ ಕ್ಷಾತ್ರ ಕುಲೋತ್ತಮ|
ಶ್ಯಂದನ ಹತ್ತು ನಾಮಕ ನಂದನಾ|
ಇಂದೆನ್ನ ಹೃದಯಾಬ್ಜ ಮಂದಿರದಲಿ ಬಂದು|
ನಿಂದಾಡುವ ದಾಶರಥಿಯೆ ತಂದೆ ತಂದೆ ತಂದೆ|
ತಂದೆ ಈ ಪರಿ ಎನ್ನ ನಂದವಾದ ಮನಕೆ ನಿನ್ನ ಮೂರ್ತಿ|
ಪೊಂದಿಸು ಭುವನ ಪಾವನವಾದ ಚರಣಾರ|
ವಿಂದ ಪಾಂಶ ಲೇಶ ಧರಿಪಾರಲ್ಲಿ|
ಬಂದು ಕಾರುಣ್ಯಸಿಂಧು ನಿನ್ನಂಘ್ರಿ ನಖಚಂದ್ರ|
ಚಂದ್ರಿಕೆಯಲಿ ಎನ್ನ ಹೃತ್ತಾಪವ|
ನೊಂದಿಸು ನಾನಾವತಾರ ನಾರಾಯಣಾ|
ಮಂಧರೋದ್ಧರನೇ ಮಹಾ ಮಹಿಮಾ|
ಸಂದೇಹ ಎನಗಿಲ್ಲ ನಿನ್ನ ಕಂಡಮೇಲೆ|
ಬಿಂದು ಮಾತುರ ಕ್ಲೇಶ ಎನಗಿಪ್ಪುದೇ|
ಕೊಂದು ಬಿಸುಟುವೆನು ಖಳರ ಉಪದ್ರವ|
ಕಂದನಾನೆಲೋ ನಿನಗೆ ಜನುಮ ಜನುಮ|
ಎಂದೆಂದಿಗೆ ಎನ್ನ ಸಾಧನದಿಂದಲಿ ಆ-|
ನಂದ ಕೊಡುವೆನೆಂಬೊ ಕೀರ್ತಿಯುಂಟೇ|
ಬಂದು ಸೇರಿದ ಭೂತ ಪ್ರೇತಾದಿಗಳು ಮಂತ್ರ|
ದಿಂದಲಿ ಅನ್ನಪಾನಾದಿಗಳು ತಂದು ಇತ್ತದ-|
ರಿಂದ ವಶವಾಗಿ ಒಡನೊಡನೇ|
ಹಿಂದೆ ತಿರುಗುತಿಪ್ಪವು ತ್ರಾಣಗೆಟ್ಟು|
ವಂದಿಪೆ ಅದರಂತೆ ನಿನಗಲ್ಲವೊ ಎಳೆ|
ಗಂದಿಯೋ ಸಂತತ ಅನುಕಂಪನೆ|
ಅಂದ ಜನಕೆ ಪ್ರಾಣ ನಿಜ ಸ್ವಭಾವ ಉ-|
ಪೇಂದ್ರ ವಿಜಯವಿಟ್ಠಲ ರಾಮ ರಘುಕುಲತಿಲಕಾ||೩||

No comments:

Post a Comment