Labels

Sunday, 6 October 2019

ಈತನೀಗ eetaneega

ಈತನೀಗ ವಾಸುದೇವನು ಲೋಕದೊಡೆಯ

ಈತನೀಗ ವಾಸುದೇವ ಈ ಸಮಸ್ತಲೋಕದೊಡೆಯ
ದಾಸಗೊಲಿದು ತೇರಾ ನೇರಿ ತೇಜಿ ಪಿಡಿದುನಡೆಸಿದಾತ 


ಧನುಜೆಯಾಳ್ದನಣ್ಣನಯ್ಯನ ಪಿತನ ಮುoದೆಕೌರವೇಂದ್ರನ
ಅನುಜೆಯಾಳಿದವನ ಶಿರವ 
ಕತ್ತರಿಸುತಾ
ಅನುಜೆಯಾಳಿದವನ ಬೆಂಕಿ ಮುಟ್ಟದoತೆ 
ಕಾಯ್ದರುಕ್ಮನ
ಅನುಜೆಯಾಳಿದವನ ಮೂರ್ತಿಯನ್ನುನೋಡಿರೋ1
ಕ್ರೂರನಾದ ಫಣಿಪ ಬಾಣ ತರಣಿಜನು ನಿರೀಕ್ಷಿಸಿಆಗ
ವೀರನೆಚ್ಚೆಯಸುಗೆ ಒಪ್ಪುತನ್ನು ವೀಕ್ಷಿಸಿ
ಧಾರಿಣಿಯ ಪದದೊಳoಗಿ ಚರಣ ಭಜಕ ನರನ
ಕಾಯ್ದ
ಭಾವಕಲ್ಪನಾದದೇವ ಈತ ನೋಡಿರೋ2

ವ್ಯೋಮಕೇಶಯಿಪ್ಪದೆಸೆಯ ಆ ಮಹಾಮಹಿಮೆಯುಳ್ಳ
ಸಾಮಜವನು ಏರಿ ಬರುವ ಶಕ್ತಿಯನೀಕ್ಷಿಸಿ
ಪ್ರೇಮದಿಂದ ಉರವನೊಡ್ಡಿ ಡಿoಗರಿಗನ ಕಾಯ್ದಾ
ಸಾರ್ವಭೌಮ ಬಡದಾದಿಕೇಶವನ್ನ ನೋಡಿರೋ3

No comments:

Post a Comment