Labels

Wednesday, 9 October 2019

ಎದ್ದು ಬರುತಾರೆ ನೋಡೆ Eddu Baratare

ಎದ್ದು ಬರುತಾರೆ ನೋಡೆ – ಗುರುಗಳು ತಾ
ವೆದ್ದು ಬರುತಾರೆ ನೋಡೆ            || ಪ ||
ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತ    || ಅ ||
ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚೆಲುವ ಮುಖದೊಳು ಪೊಳೆವೊ ದಂತಗಳಿಂದ        || ೧ ||
ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ
ಮುದಮನದಲಿ ನಿತ್ಯ ಸದಮಲ ರೂಪತಾಳಿ    || ೨ ||
ದಾತ ಗುರುಜಗನ್ನಾಥವಿಠ್ಠಲನ್ನ
ಪ್ರೀತಿಯ ಪಡಿಸುತ ದೂತರ ಪೊರೆಯುತ        || ೩ ||

No comments:

Post a Comment