Labels

Thursday, 17 October 2019

ಬಾರೋ ಭಾವಜನಯ್ಯ Baaro bhavajanayya

ಬಾರೋ ಭಾವಜನಯ್ಯ ಭಾನು ಸಾಸಿರ ಮೈಯ
ದೂರ ಮಾಡದಲೆನ್ನ ದುರಿತ ವಿಹಾರಿ ||ಪ||
ಕಡೆ ಮೊದಲಿಲ್ಲದ ಕೆಡಕು ಯೋನಿಗೆ ಬಿದ್ದು
ಕಡಲಶಾಯಿ ನೀಯಂದು ಒಡಲ್ಹೊಕ್ಕೆನಿಂದು ||೧||
ಕ್ಷಣಲವ ಮಾಳ್ಪಘಕೆಣಕೆ ಇಲ್ಲೆಲೊ ದೇವ
ಘನ ಕೃಪೆಯಲಿ ನನ್ನ ಮನಮನೆಗಾಗಿ ||೨||
ಮುನ್ನೆ ನಿನ್ನಯ ಮೊರೆಯ ಅನುಕರಿಸಿದವರ
ಮನ್ನಿಸಿ ಕಾಯೋದು ಪ್ರಸನ್ನವೆಂಕಟ ಕೃಷ್ಣ. ||೩||

No comments:

Post a Comment