Labels

Wednesday, 16 October 2019

ಅಂತರಂಗದಲಿ ಹರಿಯ antarangadali hariya

ಅಂತರಂಗದಲಿ ಹರಿಯ ಕಾಣದವನೆಹುಟ್ಟು ಕುರುಡನೋ ||pa||
ಸಂತತ ಸಿರಿಕೃಷ್ಣ ಚರಿತೆ ಕೇಳದವನೆಜಡಮತಿ ಕಿವುಡನೊ ಎಂದೆಂದಿಗು||a.pa||
ಹರುಷದಲಿ ನರಹರಿಯ ಪೂಜೆಯ ಮಾಡದವನೆ ಕೈ ಮುರಿದವನೊ|
ಕುರುವರ ಸೂತನ ಮುಂದೆ ಕೃಷ್ಣಾಯೆಂದುಕುಣಿಯದವನೆ ಕುಂಟನೋ
ನರಹರಿ ಚರಣೋದಕ ಧರಿಸದ ಶಿರನಾಯುಂಡ ಹೆಂಚು ಕಾಣೊ
ಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರ ಭೋಜನವೋ ಎಂದೆಂದಿಗು ||1||
ಅಮರೇಶ ಕೃಷ್ಣಗರ್ಪಿತವಿಲ್ಲದಾ ಕರ್ಮಅಸತಿಯ ವ್ರತನೇಮವೋ|
ರಮೆಯರಸಗೆ ಪ್ರೀತಿಯಿಲ್ಲದ ವಿತರಣೆರಂಡೆ ಕೊರಳ ಸೂತ್ರವೊ
ಕಮಲನಾಭನ ಪಾಡಿ ಪೊಗಳದ ಸಂಗೀತಗಾರ್ಧಭ ರೋದನವೊ|
ಮಮತೆಯಿಂದಲಿ ಕೇಶವಗೆ ನಮಸ್ಕಾರಮಾಡದವನೆ ಮೃಗವೊ, ಎಂದೆಂದಿಗು||2||
ಜರೆ ಪುಟ್ಟು ಮರಣವ ತೊಡೆವ ಸುಧೆಯ ಬಿಟ್ಟುಸುರೆಯ ಸೇವಿಸಬೇಡವೊ|
ಸುರಧೇನುವಿರಲಾಗಿ ಸೂಕರ ಮೊಲೆಹಾಲುಕರೆದು ಕುಡಿಯಬೇಡವೊ
ಕರಿರಥಾ ತುರಗವಿರಲು ಬಿಟ್ಟು ಕೆಡಹುವಕತ್ತೆಯೇರಲಿಬೇಡವೊ
ಪರಮ ಪದವನೀವ ಸಿರಿಕೃಷ್ಣನಿರಲಾಗಿನರರ ಸೇವಿಸಬೇಡವೊ, ಎಂದೆಂದಿಗು||3||

No comments:

Post a Comment