Labels

Thursday, 5 March 2020

ಇಂದಿರೇಶನ ಪದದ್ವಂದ್ವಕಮಲ indireshana pasa dwandwa kamala


ಇಂದಿರೇಶನ ಪದದ್ವಂದ್ವಕಮಲ ಭಜಿಪ
ಶ್ರೀ ಗುರುವರ ಭೂಪ ಪ.
ಬಂದೆನು ನಿಮ್ಮ ಪದ ಸಂದರುಶನಕೀಗ
ನೀಗಿರಿ ಭವರೋಗ ಅ.ಪ.
ಬಂದವರಯೋಗ್ಯತೆ ಅರಿತಂಕಿತವೀವ | ಕರುಣಾಳುವೆ ದೇವ
ನೊಂದೆನೀಗ ಈ ಅಜ್ಞಭವದಿ ಬಿದ್ದು | ಎಂದಿಗೆ ನಾ ಗೆದ್ದು
ಇಂದಿರೇಶನ ಹೃತ್ಕಮಲದಲಿ ಕಾಂಬೆ | ಗುರುವೆ ತೋರೆಂಬೆ
ಬಂದ ಬಂದ ಕಷ್ಟ ಹಿಂದು ಮಾಡಿ ಪೊರೆದು |
ಕೃಪೆಗೈಯ್ಯಲಿ ಬೇಕಿಂದು 1
ಮುಖ ಕಮಲದಿ ಹೊರಡುವ ವಾಕ್ಸರಣಿಗಳು |
ಗಂಗಾ ಪ್ರವಾಹಂಗಳು
ಅಕಳಂಕದ ತತ್ವಾರ್ಥದಿ ನಾ ಮುಳುಗಿ | ದುರಿತದ ಭವನೀಗಿ
ಸುಖ ಸಾರೂಪ್ಯದ ಮುಕುತಿ ಮಾರ್ಗ ಕಂಡೆ |
ಇನ್ನೀ ಭವ ತುಂಡೆ
ಭಕುತಿ ಭಾಗ್ಯವ ನಿತ್ಯದಿ ಕರುಣಿಪುದು | ಸುe್ಞÁನವ ನೀಡುವುದು 2
ಇಳೆಯೊಳಿಲ್ಲ ಈ ಚರ್ಯೆ ತೋರುವವರು | ಉದ್ಧರಿಪರಿನ್ಯಾರು
ಒಳಹೊರಗೊಂದಾಗುವ ಪರಿ ಕರುಣಿಪುದು | ನ್ಯಾಯವೆ ನೂಕುವುದು
ಪೊಳಲೊಡೆಯನ ಪರಿಪರಿ ಮಹಿಮಾದಿಗಳ | ರೂಪ ಜಾಲಗಳ
ತಿಳಿದಾನಂದಪಡುವ ಗುರುವರೇಣ್ಯ | ಪೊರೆಯ ಬೇಕೀಗೆನ್ನ 3
ಕರಿಗಿರಿ ನರಹರಿ ಪದಕಮಲಗಳನ್ನು | ಹೃದ್ವನಜದೊಳಿನ್ನು
ಪರಿಪರಿ ಪೂಜಿಸಿ ಪರಮಾದರದಲ್ಲಿ | ಸಂಕರ್ಷಣನಲ್ಲಿ
ಇರಿಸಿಹ ಮನವನು ನರರಿಗೆ ತೋರದಲೆ | ಚರಿಸುವ ಈ ಲೀಲೆ
ಅರಿತು ಪೇಳೆ ಈ ಪಾಮರಳಿಗೆ ಅಳವೇ | ಆನಂದದಲಿರುವೆ 4
ತಂದೆ ಮುದ್ದು ಮೋಹನವಿಠಲ ದೇವ | ಹೃದ್ವನಜದಲಿ ಕಾವ
ಸುಂದರ ಗೋಪಾಲಕೃಷ್ಣವಿಠ್ಠಲ ನಿಮ್ಮೊಳು |
ರಮಿಸುವ ನಿತ್ಯದೊಳು
ಮಂದಬುದ್ಧಿಗೆ ಇಂತು ಮತಿಯನಿತ್ತು | ಸಲಹಲಿ ಬೇಕಿಂತು
ತಂದೆ ಧರೆಯೊಳು ಮತ್ತೊಬ್ಬರ ಕಾಣೆ | ಕಾಪಾಡಬೇಕೆನ್ನಾಣೆ 5


No comments:

Post a Comment