Labels

Thursday, 26 March 2020

ಆ ರಣಾಗ್ರದಿ ಭೀಮಗಡ್ಡಯಿಪರಾರು


ಆ ರಣಾಗ್ರದಿ ಭೀಮಗಡ್ಡಯಿಪರಾರು? ವಾರಿಧಿ ಮೇರೆದಪ್ಪಲು ನಿಲ್ಲಿಸುವವರಾರು? ಪ
ನಾನಾ ದೇಶದ ಭೂನಾಯಕರಿದ್ದರಲ್ಲವೆ ತಾನು ದುಶ್ಯಾಸನನ ತತ್ತರಿವಾಗ ||
ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆ ಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು?1
ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿ ತೊಡೆಗಳನು ಗದೆಯಿಂದ ತುಂಡಿಸುವಾಗ ||
ಕಡುಕೋಪದವ ಹಲಧರನೇನ ಮಾಡಿದ? ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? 2
ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನ ಕೊಂದು ಬಿಸುಡುವಾಗ ಮುಂಕೊಂಡರುಂಟೆ? ||
ಚೆಂದದಿ ಪುರಂದರ ವಿಠಲದಾಸರು ಮನ ದಂದಕೆ ಬಂದಂತೆ ನಡೆದುದೆ ಮಾರ್ಗ 3


No comments:

Post a Comment