Labels

Tuesday, 10 December 2019

ವೃ೦ದಾವನ ನೋಡಿರೋ ಗುರುಗಳ vrundavana nodiro gurugala

ವೃ೦ದಾವನ ನೋಡಿರೋ  ಗುರುಗಳ
ವೃಂದಾವನ ಪಾಡಿರೋ                              || ಪ ||
ವೃಂದಾವನ ನೋಡಿ – ಆನಂದ ಮದವೇರಿ
ಚಂದದಿ ದ್ವಾದಶ ಪೌಂಡ್ರಾಂಕಿತಗೊಂಬ        || ಅ ||
ತುಂಗಭದ್ರಾ ನದಿಯ ತೀರದಿ ಇದ್ದ
ತುಂಗಮಂಟಪ ಮಧ್ಯದಿ
ಶೃಂಗಾರ ಶ್ರೀ ತುಳಸಿ ಪದ್ಮಾಕ್ಷ ಸರಗಳಿಂದ
ಮಂಗಳಕರ ಮಹಾ ಮಹಿಮೆಯಿಂದೊಪ್ಪುವ            || ೧ ||
ದೇಶದೇಶದಿ ಮೆಚ್ಚುತ ಇಲ್ಲಿಗೆ ಬಂದು
ವಾಸವಾಗಿ ಸೇವಿಪ
ಭಾಷೆ ಕೊಟ್ಟಂದದಿ ಬಹುವಿಧ ವರಗಳ
ಸೂಸುವ ಕರ ಮಹಾಮಹಿಮೆಯಿಂದೊಪ್ಪುವ        || ೨ ||
ನಿತ್ಯ ಸನ್ನಿಧಿ ಸೇವಿಪ ಭಕ್ತರಿಗೆಲ್ಲ
ಮತ್ತಭೀಷ್ಟವ ಕೊಡುತ
ಸತ್ಯಾದಿಗುಣಸಿಂಧು ವೆಂಕಟವಿಠ್ಠಲ
ನಿತ್ಯಸನ್ನಿಧಿಯಿಂದ ನಿರುತ ಪೂಜೆಯಗೊಂಬ            || ೩ ||

No comments:

Post a Comment