Labels

Sunday, 8 December 2019

ವರದ ವರದ ಶೋಭಿತ varada varada shobhita

ವರದ ವರದ ಶೋಭಿತ ವರದಾಯಕ ವರ
ಪರಮ ಪುರುಷೋತ್ತಮ ಅಮಿತ ಮಹಿಮ
ಶರಣಾಗತರ ಕಲ್ಪತರುವೆ ವಿಮಲಾಂಬುರಹ
ನಿರುಪಮ ನಿರ್ದೋಷ ನಿಖಿಳ ನಿಶೇಷಾಶೇಷ ಜನನ
ಮರಣ ರಹಿತ ಲೋಕಮಹಿತ
ಸಿರಿ ಸರಿಸಿಜ ಭವ ವಾಣಿ ವಾಯು
ಗರುಡಶೇಷ ಇಂದ್ರ ದೇವೋತ್ತಂಸ ಹಂಸಾ
ಸ್ವರತ ಸ್ವತಂತ್ರನೆ ಸುಗುಣಭರಿತ ಸೌಭಾಗ್ಯವಂತ
ನಿರುತ ಎನ್ನಂತರಂಗವಾಸ ಶ್ರೀಶಾ
ಹರಿಯೆ ನೀನಲ್ಲದೆ ಅನ್ಯರನರಿಯೆ ಎಮ್ಮ ಸಾಕುವ
ಧೊರಿಯೆ ದೂರುವೆ ಎನ್ನಯ ಮೊರೆಯ ಕೇಳೊ ಕೇಳೊ
ಮರುಳ ಕುವಳೆ ಎನ್ನ ದುರುಳ ವಿಷಯಂಗಳಿ
ಗೆರಗಿಸಿ ಕಂಗೆಡಿಪ ಕರಣಂಗಳು
ಇರುಳು ಹಗಲು ನಿನ್ನ ಪರವಾಗಿರಲಿ ಬಾಹ
ದುರಿತ ಕೋಟಿಗಳಿಗೆ ಅಂಜೆ ನಾನು
ಸುರಚಿ ನಾಮಕ ಜಗನ್ನಾಥ ವಿಠ್ಠಲ ನಿಜ
ಕರುಣಿ ಕೈ ಪಿಡಿದೆನ್ನನುದ್ಧರಿಸ ಬೇಕೊ 1
ಮಟ್ಟತಾಳ
ಈಶ ಪೂರ್ಣಕಾಮ ದೋಷರಹಿತ ಸ್ವಪ್ರ
ಕಾಶ ವಾರಿಧಿ ಲಕುಮಿ ಶೇಷ ದಿವಿಜರಿಂದ
ನೀ ಸೇವಿತನಾಗಿ ದೇಶ ಕಾಲಗಳಲ್ಲಿ ವಾಸವಾಗಿಯಿಪ್ಪ
ವಾಸುದೇವನೆ ನಿನ್ನ ಉಪಾಸನೆ ಮಾಡದಲೆ
ಕ್ಲೇಶಕೆ ಒಳಗಾದೆ ಪಾಶಧರಾರ್ಚಿತನೆ
ಘಾಸಿಗೊಳಿಸದೆಮ್ಮ ಪೋಷಿಸಬೇಕಿನ್ನು
ವಾಸವಾನುಜ ಜಗನ್ನಾಥ ವಿಠ್ಠಲ ಲೌಕಿಕ
ಆಸೆ ಬಿಡಿಸಿ ನಿನ್ನ ದಾಸನೆನಿಸಿ ಸಲಹೊ 2
ತ್ರಿವಿಡಿತಾಳ
ಕರಣನಾಮಕನಾಗಿ ಇಂದ್ರಿಯಗಳೊಳು ಮಾನಿ
ಸುರರೊಳು ನೆಲೆಸಿದ್ದು ವಿವಿಧ ವಿಷಯಂಗಳು
ನೆರವಿಗಳೊಳಗಿದ್ದು ನಿನ್ನ ರೂಪವ
ಬೆರೆÀಸಿ ಅರಿಯಗೊಡದೆ ವಿಹರಿಸುತಿಪ್ಪೆ
ಗುರಿ ಮಾಡಿ ಜೀವರ ಪುಣ್ಯಪಾಪಗಳಿಗೆ
ನಿರಯ ಸ್ವರ್ಗಗಳೀವೆ ಲೀಲೆಯಿಂದ
ಪರಿಪೂರ್ಣ ಕಾಮ ಈ ಪರಿ ಸಂಸಾರದೊಳೆಮ್ಮ
ತಿರುಗಿಸಿ ನೀ ಕ್ರೀಡೆಯಾಡುತಿಪ್ಪೆ
ವಿರಿಜಾನಾಮಕ ಜಗನ್ನಾಥ ವಿಠ್ಠಲ ನಿಜ
ಕರುಣಿ ಕೈಪಿಡಿದೆಮ್ಮನುದ್ಧರಿಸಬೇಕು 3
ಅಟ್ಟತಾಳ
ಆ ಚತುರ್ಮುಖ ರಜತಾಚಲ ನಿಲಯಾದಿ
ಖೇಚರರಿಗೆ ಮನೋವಾಚಾಮಗೋಚರ
ಪ್ರಾಚೀನ ಕರ್ಮಾಬ್ದಿ ವೀಚಿಯೊಳಗೆ ಮುಣುಗಿ
ಈ ಚಾರುವರಿವಂಗೆ ಗೋಚರಿಸುವೆ ಮ
ರೀಚನ ಕೋಟಿ ಭವ ಮೋಚಕ ನೀನೆಂದು
ಸೂಚಿಸಿದರು ಶ್ರೀಮದಾಚಾರ್ಯರು
ಈ ಚರಾಚರದಲ್ಲಿ ನೀಚರಿಗೆ ಕರ ಚಾಚದಂತೆ ಮಾಡು
ಯಾಚಿಸುವೆನು ಸವ್ಯಸಾಚಿ ವರದ ಜಗನ್ನಾಥ ವಿಠ್ಠಲ ನಿನ್ನಾ
ಲೋಚನೆ ಕೊಡುವುದು ಸದಾಚಾರಿಗಳ ಕೂಡೆ 4
ಆದಿತಾಳ
ಅನಘ ನೀನೆದೊಮ್ಮೆ ನೆನೆವ ಮನವ ಬಂಧು
ಜನರ ಕೂಡಿಕೊಂಡು ವನಿತಾದಿ ವಿಷಯಂಗಳು
ಅನುಭವಿಸುತ ತನ್ನ ಮನೆಯೊಳಗಿರಲಾ ಜೀ
ವನೇ ಮುಕ್ತನೂ ಅನಿಮಿಷ ಭಾನು
ತನಯ ಲೋಕದಲಿ ನಾರಾಯಣ
ಎನೆ ನರಕಸ್ಥ ಜನರು ಮುಕ್ತರಹರು
ಘನಮಹಿಮನೆ ನಿನ್ನ ಅನುಶ್ರುತ ಉಳ್ಳವ
ಮನುಜನಾಗಲಿ ಮತ್ತೆ ದನುಜನಾಗಲಿ ತ್ರಿಭು
ವನದೊಳು ಮಾನ್ಯನೊ ಅನುಮಾನ ಇದಕ್ಕಿಲ್ಲ ಪುತ
ರ್ದನ ಶಾಮಕ ಜಗನ್ನಾಥ ವಿಠಲ
ನಿಋಋತಿ ವಿಭೀಷಣಗೆ ಒಲಿದಂತೆ ಕಾಯೊ 5
ಜತೆ
ಭಕ್ತವತ್ಸಲ ಜಗನ್ನಾಥ ವಿಠ್ಠಲ ಮುಕ್ತಾ
ಮುಕ್ತ ನಿಯಾಮಕ ಭಕ್ತನ್ನ ಕೈ ಪಿಡಿಯೊ

No comments:

Post a Comment