Labels

Wednesday, 18 December 2019

ಶ್ರೀನಿವಾಸಾ ನೀನೇ ಪಾಲಿಸೋ shrinivasanee paliso

ಶ್ರೀನಿವಾಸಾ ನೀನೇ ಪಾಲಿಸೋ ಶ್ರೀಯುತಜನಪಾಲ
ಗಾನಲೋಲ ಶ್ರೀ ಮುಕುಂದನೇ ಪ
ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಸುವ
ವೇಣು ಗೋಪಾಲಾ ಗೋವಿಂದಾ ವೇದವೇದ್ಯ ನಿತ್ಯಾನಂದಾ ಅ.ಪ
ಎಂದಿಗೆ ನಿನ್ನ ಪದಾಬ್ಜವ-ಪೊಂದುವ ಸುಖ
ಎಂದಿಗೆ ಲಭ್ಯವೋ ಮಾಧವಾ ||
ಅಂಧಕಾರಣ್ಯದಲ್ಲಿ ನೊಂದು ತತ್ತಳಿಸುತಿಹ
ಅಂದದಿಂದ ಈ ಭವದಿ ನಿಂದು ನೊಂದೆನೋ ಮುಕುಂದ 1
ಎಷ್ಟುದಿನ ಕಷ್ಟಪಡುವುದೋ-ಯಶೋದೆಯ ಕಂದ
ದೃಷ್ಟಿಯಿಂದ ನೋಡಲಾಗದೆ ||
ಮುಟ್ಟಿ ಭಜಿಸುವನಲ್ಲ ಕೆಟ್ಟ ನರಜನ್ಮದವನು
ದುಷ್ಟಕಾರ್ಯ ಮಾಡಿದರು ಇಷ್ಟನಾಗಿ ಕೈಯ ಹಿಡಿದು 2
ಅನುದಿನ ಅನೇಕ ರೋಗಗಳ-ಅನುಭವಿಸಿದೆನೊ
ಘನಮಹಿಮ ನೀನೆ ಬಲ್ಲೆಯಾ ||
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರಂದರ ವಿಠಲ ನೀ ಎನಗೆ ಒಲಿದು 3

No comments:

Post a Comment