Labels

Wednesday, 18 December 2019

ಶೋಭನವೆ ಹರಿ ಶೋಭನವೆ shobhanave hari shobhanave

ಶೋಭನವೆ ಹರಿ ಶೋಭನವೆ ಪ.
ಶೋಭನವೆನ್ನಿರಿ ಶುಭಕರದಿಂದಲಿ
ಶೋಭನ ಶ್ರೀ ಲೋಲ ಗೋಪಾಲನೆನ್ನಿರೆ ಅಪ
ಪಾಲುಗಡಲು ಮನೆಯಾಗಿರಲು
ಆಲದೆಲೆಯ ಮೇಲೆ ಮಲಗುವರೆ ||
ಮೂಲೋಕವೇ ನಿನ್ನುದರದೊಳಿರಲು
ಬಾಲಕನಾಗಿ ಎತ್ತಿಸಿಕೊಂಬುವರೆ 1
ಸಿರಿ ನಿನ್ನ ಕೈವಶವಾಗಿರಲು
ತಿರುಮಲ ಮಲೆಯನು ಸೇರುವರೆ ||
ಸರಸಿಜಭವ - ಭವ ನಿನ್ನ ಪೂಜಿಸಲು
ನರನ ಬಂಡಿಯ ಬೋವನೆನಿಸುವರೆ 2
ಕಮ್ಮಗೋಲನ ಪಿತನಾಗಿರಲು
ಗಮ್ಮನೆ ಕುಬುಜೆಗೆ ಸೋಲುವರೆ ||
ಬ್ರಹ್ಮ ಪರಬ್ರಹ್ಮ ಚರಣಕೆ ಶರಣು
ಹಮ್ಮಿನ ದೈವ ಶ್ರೀ ಪುರಂದರವಿಠಲ 3

No comments:

Post a Comment