Labels

Thursday, 19 December 2019

ಸಾಕು ಸಾಕು ಸಂಸಾರ ಸಂಖ್ಯಾಗಿಲ್ಲ sakhu saaku sansara sankhyagilla

ಸಾಕು ಸಾಕು ಸಂಸಾರ ಸಂಖ್ಯಾಗಿಲ್ಲ ಒಲ್ಲೆ ಒಗೆತನವ ಪ.
ಆರುಮಂದಿ ಗಂಡರಾಳುವರು ಎನ್ನ
ಆರುಮಂದಿಗೆ ಮೂರು ಸುತರೆನಗೆ
ಆರು ಮೂರೇಳ್ಪರು ಭಾವ - ಮೈದುನರೆಲ್ಲ
ಆರರೆಂದರೆ ಬಿಡರು ಆರಿಗುಸುರಲಮ್ಮ 1
ಹತ್ತುಮಂದಿ ಬೆನ್ನ ಮುತ್ತಿಕೊಂಡರೆ
ಮತ್ತೆ ಬಿಟ್ಟೆನೆಂದೆ ಬಿಡಗೊಡರು
ಅತ್ತಿಗೆ ನಗೆಹಣ್ಣಿ ಹೊತ್ತು ಹೊತ್ತನೊಳೆಮ್ಮ
ನೆತ್ತಿಯೊಳು ಹಸ್ತವಿಟ್ಟೆನ್ನ ಸಲುವರಮ್ಮ 2
ಪಂತರೈವರು ಎನ್ನ ತೊಂತ ಹಂತಯೆಂದು
ಸಂಚಿತದ ಕರ್ಮವನುಣಿಸುವರು
ವಂಚನೆಯಳಿದ ಪ್ರಪಂಚವನು ಕಳೆದಿಹ
ಮಿಂಚಿನ ಪರಿಯ ವಿರಿಂಚಿ ಬರೆದಿಹನಮ್ಮ 3
ಜೇಷ್ಠನಾಗಿಹ ಪುತ್ರ ಧರ್ಮನ ಅಗಲಿಸಿ
ಭ್ರಷ್ಟ ಆತ್ತೆಯು ಮೈತ್ಯುವಾಗಿಹಳು
ಮೆಟ್ಟಿಲಿನ ಹೊರಗೆ ಕಣ್ಣಿಟ್ಟು ಸಾಧುಗಳನು
ದೃಷ್ಟಿಸಿ ನೋಳ್ಪನೆಂದರೆ ಕ್ಷಣ ಬಿಡರಮ್ಮ 4
ಒಂಬತ್ತು ಬಾಗಿಲ ಊಳಿಗವನು ಮಾಳ್ಪ
ಕುಂಬತದ ನರತ ಕಾವರ ದಾಳಿ
ಢಂಭಕವನು ಬಿಟ್ಟು ಇಂಬಿನೊಳಟ್ಟು ವಿ
ಶ್ವಂಭರ ಪುರಂದರವಿಠಲ ಧ್ಯಾನದ ಗುಟ್ಟು 5

No comments:

Post a Comment