Labels

Saturday, 14 December 2019

ಪಂಪಾತೀರದ ಲಿಂಗಾ pampateerada linga

ಪಂಪಾತೀರದ ಲಿಂಗಾ ಭವಭಸಿತಾಂಗಾ
ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ||pa||

ನೀನೆ ಗತಿಯೆಂದು ನಿದಾನದಿಂದ
ಧ್ಯಾನವ ಮಾಡಲು ದೈನ್ಯದಲಿಂದ
ಮಾನಾಭಿಮಾನದೊಡಿಯನೆ ಆನಂದ||1||

ಗಜಚರ್ಮಾಂಬರ ಗಂಗಾಧರ ಪುರವೈರಿ
ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ
ಕುಜನರೊಳಿಡದೆ ಉತ್ತಮವಾದ ದಾರಿ
ನಿಜವಾಗಿ ತೋರಯ್ಯ ದೀನರುಪಕಾರಿ||2||

ಹೇಮಗಿರಿಯ ವಾಸಾ ಈಶನಿರೀಶಾ
ಸೋಮಶೇಖರನೆ ಪಾರ್ವತಿಯ ವಿಲಾಸಾ
ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ
ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ||3||

No comments:

Post a Comment