ಮುಟ್ಟದಿರೊ ಎನ್ನನು - ರಂಗಯ್ಯಮುಟ್ಟದಿರೊ ಎನ್ನನು ಪ
ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ ಅ
ಅತ್ತೆಯೊಬ್ಬಳ ಕೂಡ ಆಡಿ ಬರುವುದ ಕಂಡೆಸತ್ಯವ ಮಾಡದಿರೊ - ಹೇ ಸರಿನಂಟ ನೂರೆಂಟ ಬಣ್ಣದ ಬಂಟ ಬಿಡು ಎನ್ನ ಗಂಟ 1
ಹಡೆದವರ ತಲೆಗೆ ಮರಳು ಚೆಲ್ಲಿದಂತೆಮಡದೇರ ಕೂಡ್ಯಾಡಿ - ಕಲಿತ್ಯೆಲ್ಲೊ ಮಿರುಗ ದಿಮ್ಮದಿರುಗ ಸೊಕ್ಕಿಮುರುಗ ಬಿಡು ಎನ್ನ ಸೆರಗ 2
ಅಂಗೈಯ ನೊರೆಹಾಲು ಮುಂಗೈಯ ಮೇಲುಗಡೆಸಿಂಗಾರವಾದುದ - ಕಂಡೆ ಕಲೆಯ ಕಾಗಿನೆಲೆಯ ಬಟ್ಟಮೊಲೆಯ ಕನಕಯ್ಯನಿಗೊಲೆಯ 3
______
No comments:
Post a Comment