ಮಂಗಳ ಶ್ರೀ ಯತಿವರಗೆ ಮಂಗಳ ಶ್ರೀ ಹರಿಸುತಗೆ
ಶೋಣಿತ ಪುರಧೀಶಗೆ ಮಂಗಳ ಗುರುವರಗೆ ||pa||
ಶೋಣಿತ ಪುರಧೀಶಗೆ ಮಂಗಳ ಗುರುವರಗೆ ||pa||
ಹರಿಸರ್ವೋತ್ತಮನೆಂದು ಪರಮ ಭಕ್ತಯಲಿಂದು
ಹರುಷದಿ ಶ್ರೀ ನರಹರಿಯನು ಖಂಬದಿ ತ್ವರದಲಿ ಕರೆದವಗೆ ||1||
ಹರುಷದಿ ಶ್ರೀ ನರಹರಿಯನು ಖಂಬದಿ ತ್ವರದಲಿ ಕರೆದವಗೆ ||1||
ಪರಿಮಳ ಗ್ರಂಥವ ಮಾಡಿ ಹರಿಯ ಪಾದಕೆ ನೀಡಿ
ಪರಮ ಸುಧೀಂದ್ರರ ಕರದಲಿ ಯತಿ ಆಶ್ರಮ ಪಡೆದವಗೆ ||2||
ಪರಮ ಸುಧೀಂದ್ರರ ಕರದಲಿ ಯತಿ ಆಶ್ರಮ ಪಡೆದವಗೆ ||2||
ಭಕ್ತರ ಭಾಗ್ಯನಿಧಿಗೆ ನಿತ್ಯಸುಖಾ ಪಡೆದವಗೆ
ಮುಕ್ತಿಯ ದ್ವಾರವ ತೋರುವ ಗುರುರಾಘವೇಂದ್ರನಿಗೆ ||3||
ಮುಕ್ತಿಯ ದ್ವಾರವ ತೋರುವ ಗುರುರಾಘವೇಂದ್ರನಿಗೆ ||3||
ಕರುಣಾಸಾಗರನೀತಾ ಕರೆದಲ್ಲೆ ಬರುವಾತಾ
ಪೊರೆಯಂದೊದರಲು ಭಕ್ತರ ಪಿಡಿಯುವ ಮೀರದೇ ಕಾಯ್ವವಗೆ ||4||
ಪೊರೆಯಂದೊದರಲು ಭಕ್ತರ ಪಿಡಿಯುವ ಮೀರದೇ ಕಾಯ್ವವಗೆ ||4||
ವರಧೀರ ಹನುಮೇಶವಿಠಲನಾ ನಿಜದಾಸಾ
ಸರಸದಿ ಅರ್ಚನೆಗೊಳ್ಳುವ ಮಂತ್ರಾಲಯ ಪುರವಾಸನಿಗೆ ||5||
ಸರಸದಿ ಅರ್ಚನೆಗೊಳ್ಳುವ ಮಂತ್ರಾಲಯ ಪುರವಾಸನಿಗೆ ||5||
No comments:
Post a Comment