Labels

Monday, 16 December 2019

ಕಾಮಿತಾರ್ಥದಾಯಿನೇ | ತುಳಸಿ ಕಲ್ಯಾಣಿ kamitaarthadaayini tuladi kalyani

ಕಾಮಿತಾರ್ಥದಾಯಿನೇ | ತುಳಸಿ ಕಲ್ಯಾಣಿ
ಶ್ಯಾಮಾ ವಿಶಾಲನಯನೇ ಪ
ಹಸುರು ಕಂಚುಕಧರೆ ಆನಂದ ರಸಿಕೇ
ಶಶಿ ಬಿಂಬಸಮ ಸುಂದರಮುಖೇ
ಉಸಿರುಬಿಡದೆ ನಿನ್ನ ಕೊಸರುವೆ ವರಗಳ
ಹಸನಾಗಿ ಕೊಡುವೆನೀ ಅತಿಶಯದಿಂದಲಿ 1
ಬಣ್ಣಾದ ಸರಪಳಿ ಹಾಕಿದ ಕೊರಳೇ
ಬಟ್ಟ ಮುತ್ತಿನ ಹರಳೇ
ಹುಣ್ಣಿಮೆ ಚಂದ್ರನಂತೆ ಸುಂದರಮುಖದವಳೇ
ಪನ್ನಂಗ ಶಯನಗೆ ಮಾಡಿದೆ ಮರುಳೇ 2
ಬಡನಡುವಿಗೆ ಒಡ್ಯಾಣಾ | ರುಳಿ ಪೈಜಣ
ಕಡಗಾ ಕಂಕಣ ಹೊಳಿಯುವ ಜಾಣೆ |
ನಡೆದು ಬಾರೆ ಶ್ರೀ ನರಸಿಂಹವಿಠಲನ
ಹಿಡಿದು ನಿನ್ನ ಪಾದ ಬಿಡದೆ ಭಜಿಪೆನಮ್ಮ 3

No comments:

Post a Comment