ದುರಿತ ಜೀಮೂತವಾತ ಪೊರೆಯೈ ನಿನಗೆ ನಿರುತ
ಶರಣು ಪೊಗುವೆ ನೀತ – ಕರವ ಪಿಡಿಯೋ ಪ್ರೀತ
ಧರಣಿಯೊಳಗೆ ವಿಸ್ತರಿಸಬಲ್ಲವರಾರು
ಗುರುವೆ ನಿಜನಮಿತರ ಸುರತರುವೆ. || ಪ ||
ನ೦ಬಿದೆ ನಿನ್ನ ಪಾದಾ೦ಬುಜವ ಅನುಗಾಲ
ಬೊಬಿಡದಲೆ ನಾನೆ೦ಬೋದು ಬಿಡಿಸಿ೦ದು
ಬೆ೦ಬಲವಾಗು – ಆನೆ೦ಬ ಖಳರ ನೀಗು
ಇ೦ಬಾಗಿ ನೋಡು ದಿವ್ಯಾ೦ಬಕದಿ೦ದ
ಢ೦ಬಕತನವೆ೦ದೆ೦ಬುದು ಕೊಡದಲೆ
ಸ೦ಭ್ರಮದಲಿ ಹರಿಹ೦ಬಲ ಬಯಸುವ
ಹ೦ಬಲಿಗರ ಕೂಡ ಇ೦ಬುತೋರು ಬಲು
ಗ೦ಭೀರ ಕರುಣಿ || ೧ ||
ಎಣೆಗಾಣೆ ನಿಮಗೆ ಕು೦ಭಿಣಿಯೊಳಗೆಲ್ಲ ಯತಿ
ಮಣಿಯೆ ರಾಮವ್ಯಾಸರ ಮಣಿಭೂಷಣ ಚರಣಾ
ರ್ಚನೆ ಮಾಳ್ಪ ಮಹಿಮ-ಮನಸಿಜಶರ ಭೀಮ
ಮನದಣಿಯೆ ಉಣಿಸಿ ಈ ದಿನ ಮೊದಲು ಪಿಡಿದು
ಜನುಮ ಜನುಮದ ಸಾಧನ ಫಲಿಸಿತೊ ಯೋ
ಚನೆಗೊಳಲ್ಯಾತಕೆ ಅನುಮಾನ ಸಲ್ಲದು
ಘನತರಕೀರ್ತಿಯೊ ಎಣಿಕೆಯಿಲ್ಲದೆ ಮೆರೆವ ದಿವಪ್ರಭಾಕಾಯ || ೨ ||
ವರಹಜೆ ಸರಿತೆಯಲಿ ಸ್ಥಿರವಾಗಿ ನಿ೦ದು
ಧರಣಿಸುರರಿ೦ದಾರಾಧನೆ ಸರಸರನೆ ಹಗಲು
ಇರುಳು ಕೈಗೊಳುತ ವಕ್ಕಾರಗಳೆ ಹರಿಸಿ ಸು೦
ದರ ವರಗಳನ್ನಿತ್ತು
ಚಿರಕಾಲ ಬಿಡದಲೆ ಪರವಾದಿಯ ಬಲ
ಉರದಲ್ಲಣ ಪೂತುರೆ-ಸುಧೀ೦ದ್ರರ
ಕರಾರವಿ೦ದಜ ಅರಸರಸರ ಪ್ರೀಯ ವಿಜಯವಿಠ್ಠಲನ
ಬಿರಿದು ಹೊಯಿಸುವ ಧೀರಾ – ಗುರು ರಾಘವೇ೦ದ್ರ || ೩ ||
ಶರಣು ಪೊಗುವೆ ನೀತ – ಕರವ ಪಿಡಿಯೋ ಪ್ರೀತ
ಧರಣಿಯೊಳಗೆ ವಿಸ್ತರಿಸಬಲ್ಲವರಾರು
ಗುರುವೆ ನಿಜನಮಿತರ ಸುರತರುವೆ. || ಪ ||
ನ೦ಬಿದೆ ನಿನ್ನ ಪಾದಾ೦ಬುಜವ ಅನುಗಾಲ
ಬೊಬಿಡದಲೆ ನಾನೆ೦ಬೋದು ಬಿಡಿಸಿ೦ದು
ಬೆ೦ಬಲವಾಗು – ಆನೆ೦ಬ ಖಳರ ನೀಗು
ಇ೦ಬಾಗಿ ನೋಡು ದಿವ್ಯಾ೦ಬಕದಿ೦ದ
ಢ೦ಬಕತನವೆ೦ದೆ೦ಬುದು ಕೊಡದಲೆ
ಸ೦ಭ್ರಮದಲಿ ಹರಿಹ೦ಬಲ ಬಯಸುವ
ಹ೦ಬಲಿಗರ ಕೂಡ ಇ೦ಬುತೋರು ಬಲು
ಗ೦ಭೀರ ಕರುಣಿ || ೧ ||
ಎಣೆಗಾಣೆ ನಿಮಗೆ ಕು೦ಭಿಣಿಯೊಳಗೆಲ್ಲ ಯತಿ
ಮಣಿಯೆ ರಾಮವ್ಯಾಸರ ಮಣಿಭೂಷಣ ಚರಣಾ
ರ್ಚನೆ ಮಾಳ್ಪ ಮಹಿಮ-ಮನಸಿಜಶರ ಭೀಮ
ಮನದಣಿಯೆ ಉಣಿಸಿ ಈ ದಿನ ಮೊದಲು ಪಿಡಿದು
ಜನುಮ ಜನುಮದ ಸಾಧನ ಫಲಿಸಿತೊ ಯೋ
ಚನೆಗೊಳಲ್ಯಾತಕೆ ಅನುಮಾನ ಸಲ್ಲದು
ಘನತರಕೀರ್ತಿಯೊ ಎಣಿಕೆಯಿಲ್ಲದೆ ಮೆರೆವ ದಿವಪ್ರಭಾಕಾಯ || ೨ ||
ವರಹಜೆ ಸರಿತೆಯಲಿ ಸ್ಥಿರವಾಗಿ ನಿ೦ದು
ಧರಣಿಸುರರಿ೦ದಾರಾಧನೆ ಸರಸರನೆ ಹಗಲು
ಇರುಳು ಕೈಗೊಳುತ ವಕ್ಕಾರಗಳೆ ಹರಿಸಿ ಸು೦
ದರ ವರಗಳನ್ನಿತ್ತು
ಚಿರಕಾಲ ಬಿಡದಲೆ ಪರವಾದಿಯ ಬಲ
ಉರದಲ್ಲಣ ಪೂತುರೆ-ಸುಧೀ೦ದ್ರರ
ಕರಾರವಿ೦ದಜ ಅರಸರಸರ ಪ್ರೀಯ ವಿಜಯವಿಠ್ಠಲನ
ಬಿರಿದು ಹೊಯಿಸುವ ಧೀರಾ – ಗುರು ರಾಘವೇ೦ದ್ರ || ೩ ||
No comments:
Post a Comment