Labels

Monday, 16 December 2019

ಅಪರಾಧಿ ನಾನಲ್ಲ ಅಪವಾದಯನಗಿಲ್ಲಾ aparaadhi naanalla aparadhi enagilla

ಅಪರಾಧಿ ನಾನಲ್ಲ ಅಪವಾದಯನಗಿಲ್ಲಾ ಪ.
ಕಪಟನಾಟಕ ಕೃಷ್ಣ ಯನಗೆ ನೀನಪರಾಧಿ ಅ.ಪ.
ನೀನು ಆಡಿಸಲು ಜೀವಗಳನುದಿನದ ಬೊಂಬೆ
ಆನೆ ಬಲ್ಲೆನೆ ಬ್ಯಾರೆ ಪಥವನೊಂದಾ
ನೀನಿಟ್ಟ ಸೂತ್ರದಂತಿರಲು ಕೈಕಾಲುಗಳು
ನೀನು ಮುಗ್ಗಿಸಲು ಮುಗ್ಗುವ ಜೀವ ನಾನಾದೆ 1
ಒಂಬತ್ತು ಬಾಗಿಲುವುಳ್ಳ ಪಟ್ಟಣದೊಳಗೆ
ತುಂಬಿದಿಪ್ಪತ್ನಾಲ್ಕು ಮೊನೆಯಾಳ್ಗಳ
ನಂಬಿಸಿ ಕಾವಲು ನೀನು ಎನ್ನೊಳಗಿದ್ದು
ಕಂಬುದಾ (?) ಯೇರಿ ಕೊಲಿಸುವುದು ನಿನಗನ್ಯಾಯ 2
ಅಂತರಾತ್ಮಕ ನೀನು ಒಳಗಿದ್ದಾ ಬರಿ
ತಂತ್ರಿಯೆಂದೆನ್ನ ಕೊಲ್ಲಿಸುವರೇನೊ ಹೇಳೋ
ಕಂತುವಿನ ಜನಕ ಲಕ್ಷ್ಮೀರಮಣ ಕಾಯಬೇ-
ಕೆಂತೆಂದೆನ್ನ ಅಚಲಾನಂದವಿಠಲ

No comments:

Post a Comment